ಸಮುದ್ರ ತೀರಕ್ಕೆ ಬಂದು ರಾಶಿಬಿದ್ದ 150 ತಿಮಿಂಗಿಲಗಳು

ಸಮುದ್ರ ತೀರಕ್ಕೆ ಬಂದು ರಾಶಿಬಿದ್ದ 150 ತಿಮಿಂಗಿಲಗಳು

ಮೇಲ್ನೋರ್ನ್: ಆಸ್ಟ್ರೇಲಿಯಾದ ತಾಸ್‌ಮಾನಿಯಾ ರಾಜ್ಯದ ಅರ್ಥರ್ ನದಿ ಸಮುದ್ರ ಸೇರುವ ಕಡಲ ತೀರದ ಬಳಿ 150 ತಿಮಿಂಗಿಲಗಳು ತೇಲಿ ಬಂದು ತೀರಕ್ಕೆ ಬಿದ್ದಿರುವ ಘಟನೆ ನಡೆದಿದೆ.

ತೀರಕ್ಕೆ ಬಂದು ಬಿದ್ದಿರುವ 150 ತಿಮಿಂಗಿಲಗಳ ಪೈಕಿ 136 ತಿಮಿಂಗಿಲಗಳು ಇನ್ನೂ ಜೀವಂತವಾಗಿದ್ದು, ಉಳಿದವು ಸಾವನ್ನಪ್ಪಿದೆ. ಇನ್ನು ಬದುಕಿರುವ ಕೆಲವು ತಿಮಿಂಗಿಲಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ ಎಂದು ಆಸ್ಟ್ರೇಲಿಯಾದ ಪರಿಸರ ಸಚಿವಾಲಯದ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಮಿಂಗಿಲಗಳು ಕಡಲ ತೀರಕ್ಕೆ ಬಂದು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, ಈ ಪ್ರದೇಶಕ್ಕೆ ಪರಿಹಾರ ಕಾರ್ಯಾಚರಣೆ ತಂಡ ತೆರಳುವುದಕ್ಕೆ ಭಾರಿ ತೊಂದರೆ ಇದೆ. ಇದೊಂದು ಜನವಸತಿ ಹಾಗೂ ಸಾರಿಗೆ ಸಂಪರ್ಕಗಳು ಇಲ್ಲದಿರುವ ಪ್ರದೇಶ. ಆದರೂ ಕೂಡ ಕೆಲವು ಮರಿ ತಿಮಿಂಗಿಲಗಳನ್ನು ಆಳ ಸಮುದ್ರಕ್ಕೆ ತಳ್ಳುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯ ಪ್ರಕಾರ, ಇಷ್ಟೊಂದು ಪ್ರಮಾಣದಲ್ಲಿ ತಿಮಿಂಗಿಲಗಳು ಸಮುದ್ರದ ತೀರಕ್ಕೆ ಬಂದು ಬಿದ್ದಿರುವುದಕ್ಕೆ ಕಾರಣ ಬಹಿರಂಗವಾಗಿಲ್ಲ. ಆಳ ಸಮುದ್ರದಲ್ಲಿ ಯಾವುದೋ ದೊಡ್ಡ ಶಬ್ದ, ಶತ್ರುಗಳ ದಾಳಿ, ಹವಾಮಾನ ವೈಪರಿತ್ಯ ಅಥವಾ ಅನಾರೋಗ್ಯದಿಂದ ಬಂದು ಬಿದ್ದಿರಬಹುದು ಎನ್ನಲಾಗದೆ.

ಅಂತರಾಷ್ಟ್ರೀಯ