
ಮಂಗಳೂರು ಫೆಬ್ರವರಿ 18: ರಾಜ್ಯ ಸರಕಾರ ದಿವಾಳಿಯಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಡೇ ವನ್ ನಿಂದ ಇದನ್ನೇ ಹೇಳುತ್ತಿದ್ದಾರೆ. ಆದರೆ ರಾಜ್ಯ ಸರಕಾರದ ಖಜಾನೆಯನ್ನು ದಿವಾಳಿ ಮಾಡಿಟ್ಟು ಹೋದವರು ಅವರೇ, ದುಡ್ಡಿಲ್ಲದೇ ಹೆಚ್ಚಿಗೆ ಕೆಲಸ ಮಾಡಿ ಬಿಲ್ ಪೆಂಡಿಗ್ ಇಟ್ಟವರು ಯಾರು, ಈಗ ಬಿಲ್ ಕೊಡಿಸಿ ಎಂದು ಅವರೇ ಪ್ರತಿಭಟಿಸ್ತಿದ್ದಾರೆ. ನಮ್ಮ ಮೇಲೆ ಭಾರ ಹಾಕಿದ್ದಾರೆ,ಅದನ್ನ ಸರಿ ಮಾಡೋ ಕೆಲಸ ನಾವು ಮಾಡ್ತೇವೆ ಎಂದರು.


ಡಿಕೆಶಿಗೆ ಅಧ್ಯಕ್ಷ ಸ್ಥಾನ ಹಾಗ ಮಂತ್ರಿ ಸ್ಥಾನ ಎರಡನ್ನೂ ನಿಭಾಯಿಸುವ ಸಾಮರ್ಥ್ಯ ಇದ್ದರೆ ಎರಡನ್ನೂ ಮಾಡಬಹುದು. ಅದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಸಚಿವ ಸಂಪುಟ ಬದಲಾವಣೆ ಮಾಡೋದು ಹೈಕಮಾಂಡ್ ಗೆ ಬಿಟ್ಟದ್ದು,ನಮಗೇನು ಗೊತ್ತಾಗಲ್ಲ, ಮುಂದಿನ ಮುಖ್ಯಮಂತ್ರಿ ಜಾರಕಿಹೊಳಿ ಅನ್ನೋ ಕಾರ್ಯಕರ್ತರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಎಲ್ಲಾ ಕಡೆ ಎಲ್ಲರೂ ಸಿಎಂ ಅಂತ ಕಾರ್ಯಕರ್ತರು ಹೇಳ್ತಾರೆ. ಪರಮೇಶ್ವರ್,ಡಿಕೆಶಿ, ನನ್ನ ಬಗ್ಗೆ ಅಭಿಮಾನಿಗಳು ಹೇಳ್ತಾರೆ. ಅವರವರ ಅಭಿಮಾನಿಗಳು ಇದ್ದೇ ಇರ್ತಾರೆ,ಅವರು ಹೇಳ್ತಾರೆ,ಅದು ಅವರ ಪ್ರೀತಿ, ಸಿಎಂ ಸ್ಥಾನ ಸಿಗೋದು ಅದು ಅಷ್ಟು ಸುಲಭ ಅಲ್ಲ,ಕಷ್ಟದ ಕೆಲಸ ಎಂದು ಸಚಿವ ಸತೀಶ್ ಜಾರಕಿ ಹೊಳಿ ಮಂಗಳೂರಿನಲ್ಲಿ ಹೇಳಿದ್ದಾರೆ.