ಕೃಷಿ ಕ್ಷೇತ್ರದಲ್ಲೊಂದು ಜಾಗತಿಕ ಮಟ್ಟದ ಕ್ರಾಂತಿ; ಪ್ರಥಮ ಬಾರಿಗೆ ಸಮುದ್ರದ ಮೂಲಕ ಆಸ್ಟ್ರೇಲಿಯಾಕ್ಕೆ ದಾಳಿಂಬೆ ರಫ್ತು ಮಾಡಿದ ಭಾರತ;

ಕೃಷಿ ಕ್ಷೇತ್ರದಲ್ಲೊಂದು ಜಾಗತಿಕ ಮಟ್ಟದ ಕ್ರಾಂತಿ; ಪ್ರಥಮ ಬಾರಿಗೆ ಸಮುದ್ರದ ಮೂಲಕ ಆಸ್ಟ್ರೇಲಿಯಾಕ್ಕೆ ದಾಳಿಂಬೆ ರಫ್ತು ಮಾಡಿದ ಭಾರತ;

ಭಾರತೀಯ ರೈತರು ಮತ್ತು ರಫ್ತುದಾರರಿಗೆ ಮಹತ್ತರ ಹೆಜ್ಜೆ

ನವದೆಹಲಿ: ಕೃಷಿ ರಫ್ತಿನಲ್ಲಿ ಭಾರತವು ಮಹತ್ವದ ಮೈಲಿಗಲ್ಲು ಸಾಧಿಸಿದೆ! ಮೊದಲ ಬಾರಿಗೆ, ಭಾರತೀಯ ದಾಳಿಂಬೆಗಳನ್ನು ಸಮುದ್ರದ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗಿದೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಆಗ್ರೋಸ್ಟಾರ್ ಮತ್ತು ಕೇ ಬೀ ಎಕ್ಸ್‌ಪೋರ್ಟ್ಸ್‌ನ ಸಹಭಾಗಿತ್ವದಲ್ಲಿ ಇದನ್ನು ಸಾಕಾರಗೊಳಿಸಲಾಗಿದೆ.

ಇದು ಭಾರತೀಯ ರೈತರಿಗೆ ಒಳ್ಳೆಯ ಸುದ್ದಿ, ಏಕೆಂದರೆ ಇದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ತಾಜಾ ಹಣ್ಣುಗಳನ್ನು ಮಾರಾಟ ಮಾಡಲು ಹೊಸ ಅವಕಾಶಗಳು ದೊರೆಯುತ್ತದೆ.

ಹೇಗೆ ಪ್ರಾರಂಭವಾಯಿತು? – ಸಮುದ್ರ- ರಪ್ತಿಗೂ ಮುನ್ನ ಮೊದಲ ವೈಮಾನಿಕ ರಪ್ತು

2024 ರ ಪ್ರಾರಂಭದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾಕ್ಕೆ ದಾಳಿಂಬೆ ರಫ್ತು ಮಾಡಲು ಅನುಮತಿ ದೊರೆಯಿತು. ಮಾರುಕಟ್ಟೆಯನ್ನು ಪರೀಕ್ಷಿಸುವ ಉದ್ದೇಶದಿಂದ, ಜುಲೈ 2024 ರಲ್ಲಿ ವಿಮಾನದ ಮೂಲಕ ಮೊದಲನೇ ರಫ್ತನ್ನು ಮಾಡಲಾಯಿತು. ನಮ್ಮ ದೇಶದ ಹಣ್ಣುಗಳಿಗೆ ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಅರಿತ ಭಾರತೀಯ ರಫ್ತುದಾರರು ವೆಚ್ಚವನ್ನು ಕಡಿಮೆ ಮಾಡಲು ಸಮುದ್ರದ ಮೂಲಕ ಹಣ್ಣುಗಳನ್ನು ಕಳುಹಿಸಲು ನಿರ್ಧರಿಸಿದರು.

ಪರಿಣಾಮವಾಗಿ, ಡಿಸೆಂಬರ್ 6, 2024 ರಂದು ಮೊದಲನೇ ಸರಕು ಹೊತ್ತ ಹಡಗು ಭಾರತದಿಂದ ಹೊರಟಿತು. ಮಹಾರಾಷ್ಟ್ರದ ಸೋಲಾಪುರದಿಂದ 5.7 ಮೆಟ್ರಿಕ್ ಟನ್ ಪ್ರೀಮಿಯಂ ದಾಳಿಂಬೆಗಳನ್ನು ಸಾಗಿಸಿತು. ಇದು ಜನವರಿ 13, 2025 ರಂದು ಸಿಡ್ನಿಗೆ ತಲುಪಿತು. 6.56 ಮೆಟ್ರಿಕ್ ಟನ್ ದಾಳಿಂಬೆಗಳಿರುವ ಎರಡನೇ ಸರಕು ಹೊತ್ತ ಹಡಗು ಜನವರಿ 6, 2025 ರಂದು ಬ್ರಿಸ್ಬೇನ್ ತಲುಪಿತು.

ಸಮುದ್ರ- ರಫ್ತು – ದೇಶದ ಆರ್ಥಿಕತೆಯ ಮೈಲಿಗಲ್ಲು

ಅಗ್ಗ: ಜಲ ಸಾರಿಗೆ ವಾಯು ಸಾರಿಗೆಗಿಂತ ಅಗ್ಗವಾಗಿದೆ.

ದೊಡ್ಡ ಮಾರುಕಟ್ಟೆ: ಈ ಸಮಯದಲ್ಲಿ ಆಸ್ಟ್ರೇಲಿಯಾ ದಾಳಿಂಬೆ ಬೆಳೆಯುವುದಿಲ್ಲ, ಆದ್ದರಿಂದ ಭಾರತೀಯ ರೈತರು ಹೆಚ್ಚು ದಾಳಿಂಬೆಗಳನ್ನು ಮಾರಾಟ ಮಾಡಬಹುದು.

ರೈತರಿಗೆ ಉತ್ತಮ ಬೆಲೆಗಳು: ಸಾರಿಗೆ ವೆಚ್ಚಗಳು ಕಡಿಮೆಯಾಗಿರುವುದರಿಂದ, ಆಸ್ಟ್ರೇಲಿಯಾದ ಖರೀದಿದಾರರಿಗೆ ಪೈಪೋಟಿ ನೀಡುವ ಬೆಲೆಯಲ್ಲಿ ರೈತರು ಹೆಚ್ಚು ಗಳಿಸಬಹುದು.

ಆಸ್ಟ್ರೇಲಿಯಾದಲ್ಲಿ ಅಪಾರ ಬೇಡಿಕೆ

ಸಿಡ್ನಿ, ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್‌ಗೆ ದಾಳಿಂಬೆ ತಲುಪಿದಾಗ, ಅವುಗಳಿಗೆ ಆಸ್ಟ್ರೇಲಿಯಾದ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಅನೇಕ ಆಮದುದಾರರು ತಕ್ಷಣವೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಬೇಕೆಂದು ಬೇಡಿಕೆ ಇಟ್ಟಿದ್ದಾರೆ.

APEDA ಅಧ್ಯಕ್ಷ ಶ್ರೀ ಅಭಿಷೇಕ್ ದೇವ್ “ಭಾರತೀಯ ಹಣ್ಣುಗಳ ರಫ್ತು ವೇಗವಾಗಿ ಬೆಳೆಯುತ್ತಿದೆ. ದಾಳಿಂಬೆ ಹಣ್ಣಿಗೇ 20% ಹೆಚ್ಚಾಗಿದೆ. ಭಾರತವು ಜಾಗತಿಕ ಮಾರುಕಟ್ಟೆಗಳಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪೂರೈಸಬಲ್ಲದು ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಭಾರತೀಯ ರೈತರು ತಮ್ಮ ಉತ್ಪನ್ನಗಳನ್ನು ಪ್ರಪಂಚದಾದ್ಯಂತ ಮಾರಾಟ ಮಾಡುವಂತೆ ಮಾಡಲು APEDA ಬದ್ಧವಾಗಿದೆ. ಈ ಯಶಸ್ಸು ಭವಿಷ್ಯದಲ್ಲಿ ಇನ್ನೂ ದೊಡ್ಡ ರಫ್ತಿಗೆ ಕಾರಣವಾಗುತ್ತದೆ.” ಎಂದಿದ್ದಾರೆ.

ಗುಣಮಟ್ಟ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳುವುದು

ಹಣ್ಣುಗಳು ತಾಜಾವಾಗಿವೆ ಮತ್ತು ಅಂತರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು, APEDA ANARNET ಅನ್ನು ಎಂಬ ಡಿಜಿಟಲ್ ವ್ಯವಸ್ಥೆಯನ್ನು ಬಳಸಿದೆ. ಈ ವ್ಯವಸ್ಥೆಯಿಂದ ತೋಟದಿಂದ ಮಾರುಕಟ್ಟೆಗೆ ಹಣ್ಣುಗಳ ಸ್ಥಿತಿಯನ್ನು ಪತ್ತೆಹಚ್ಚಬಹುದು. ಇದರ ಸಹಾಯದಿಂದ ಖರೀದಿದಾರರು ಉತ್ಪನ್ನದ ಗುಣಮಟ್ಟವನ್ನು ಖಚಿತಪಡಿಸುವುದರಿಂದ, ಅವರ ವಿಶ್ವಾಸಕ್ಕೆ ಪಾತ್ರವಾಗಿದೆ.

ಮುಂದೇನು?

ಶೀಘ್ರದಲ್ಲೇ ಹೆಚ್ಚಿನ ಪ್ರಮಾಣದ ರಫ್ತುಗಳು ಆಗಲಿವೆ

ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭವಾಗುವ ಮುಂದಿನ ರಪ್ತಿನೊಂದಿಗೆ, ಆಗ್ರೋಸ್ಟಾರ್ ಮತ್ತು ಕೇ ಬೀ ಎಕ್ಸ್‌ಪೋರ್ಟ್ಸ್‌ನಂತಹ ಕಂಪನಿಗಳು ಆಸ್ಟ್ರೇಲಿಯಾಕ್ಕೆ ಹೆಚ್ಚಿನ ದಾಳಿಂಬೆಗಳನ್ನು ಕಳುಹಿಸಲು ತಯಾರಿ ನಡೆಸುತ್ತಿವೆ. ಈ ಯಶಸ್ಸು ಭಾರತವನ್ನು ಜಾಗತಿಕ ಕೃಷಿ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಮಾಡುತ್ತದೆ ಮತ್ತು ಆಸ್ಟ್ರೇಲಿಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುತ್ತದೆ.

APEDA

APEDA ರೈತರು ಮತ್ತು ಆಹಾರ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಾರಾಟ ಮಾಡಲು ಸಹಾಯ ಮಾಡುವಭಾರತೀಯ ಸರಕಾರಿ ಸಂಸ್ಥೆ.  ಇದು ತಾಜಾ ಹಣ್ಣುಗಳು, ತರಕಾರಿಗಳು, ಅಕ್ಕಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತನ್ನು ಬೆಂಬಲಿಸುತ್ತದೆ. ಹೆಚ್ಚಿನ ದೇಶಗಳು ಭಾರತೀಯ ಕೃಷಿ ಉತ್ಪನ್ನಗಳಲ್ಲಿ ಆಸಕ್ತರಾಗಿರುವುದರಿಂದ, ಈ ನಡೆ ರೈತರು ಮತ್ತು ರಫ್ತುದಾರರಿಗೆ ದೊಡ್ಡ ಅವಕಾಶಗಳ ಪ್ರಾರಂಭವಾಗಿದೆ.

ಆಸ್ಟ್ರೇಲಿಯಾಕ್ಕೆ ಮಾಡಿದ ದಾಳಿಂಬೆಯ ಈ ಮೊದಲ ಜಲ-ರಫ್ತು ಭಾರತಕ್ಕೆ ಒಂದು ದೊಡ್ಡ ಸಾಧನೆ. ಇದು ರೈತರು ಉತ್ತಮ ಆದಾಯವನ್ನು ಗಳಿಸಲು, ರಫ್ತು ವಿಸ್ತರಿಸಲು ಮತ್ತು ಭಾರತೀಯ ಹಣ್ಣುಗಳನ್ನು ಪ್ರಪಂಚದೆಲ್ಲೆಡೆ ಹೆಚ್ಚು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ.

ಅಂತರಾಷ್ಟ್ರೀಯ