ಇಂಫಾಲ್: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಕುರಿತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.



ಅಧಿಸೂಚನೆಯ ಪ್ರಕಾರ, ಮಣಿಪುರ ರಾಜ್ಯಪಾಲರಿಂದ ವರದಿ ಸ್ವೀಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂವಿಧಾನದ ಕಲಂ 356 ರ ಪ್ರಕಾರ ತಮ್ಮ ಅಧಿಕಾರವನ್ನು ಬಳಸಿಕೊಂಡು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದಿದ್ದಾರೆ. ಅಧಿಸೂಚನೆಯ ಪ್ರಕಾರ, ಮಣಿಪುರ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಮುಂದಿನ ಆದೇಶಗಳವರೆಗೆ ರಾಜ್ಯವನ್ನು ಕೇಂದ್ರ ಸರಕಾರವೇ ನೇರವಾಗಿ ಆಡಳಿತ ನಡೆಸಲಿದೆ.
ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜಕೀಯ ಪರಿಸ್ಥಿತಿಗಳನ್ನು ಉತ್ತಮ ನಿರ್ವಹಿಸುವುದಕ್ಕೆ ಬೇಕಾದ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಫೆಬ್ರವರಿ 9, 2025 ರಂದು ರಾಜೀನಾಮೆ ನೀಡಿದರು. ಇದಕ್ಕೆ ಪ್ರಮುಖ ಕಾರಣವಾಗಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಉಲ್ಬಣಗೊಂಡ ಜನಾಂಗೀಯ ಹಿಂಸಾಚಾರವನ್ನು ಕಾಣಬಹುದು.
ಏನಾಗಿತ್ತು…?
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಉಲ್ಬಣಗೊಂಡ ಜನಾಂಗೀಯ ಹಿಂಸಾಚಾರದ ಕಾರಣ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಫೆಬ್ರವರಿ 9, 2025 ರಂದು ರಾಜೀನಾಮೆ ನೀಡಿದರು. ಈ ಸಂಘರ್ಷವು ಮೇ 2023ರಿಂದಲೇ ನಡೆಯುತ್ತಿದ್ದು, ಇದರಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕನಿಷ್ಠ 60,000 ಜನರು ನಿರಾಶ್ರಿತರಾಗಿದ್ದಾರೆ. ಮುಖ್ಯಮಂತ್ರಿ ಸಿಂಗ್ ಅವರು ಮೈತೇಯಿ ಸಮುದಾಯದ ಪರ ನಿಲುವು ತಾಳಿದರೆಂದು ಆರೋಪಿಸಲಾಗಿತ್ತು ಮತ್ತು ಅವರ ಮೇಲೆ ಮೈತ್ರಿ ಪಕ್ಷಗಳು ಮತ್ತು ಬಿಜೆಪಿ ಪಕ್ಷದಿಂದ ರಾಜೀನಾಮೆ ನೀಡಬೇಕೆಂಬ ಒತ್ತಡ ಇತ್ತು ಎಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ, ವಿಪಕ್ಷಗಳು ಸರಕಾರದ ವಿರುದ್ಧ ಅವಿಶ್ವಾಸ ಮತವನ್ನು ಮಂಡಿಸುವ ಬಗ್ಗೆ ಯೋಜಿಸುತ್ತಿದ್ದ ಕಾರಣ, ರಾಜಕೀಯ ಒತ್ತಡದ ನಡುವೆಯೇ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ.