
ನವದೆಹಲಿ: ಭಾರತೀಯ ಹವಾಮಾನ ಇಲಾಖೆ ಇಂದು ಉತ್ತರ ಭಾರತದ ಮೇಲೆ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಇಲಾಖೆಯ ಪ್ರಕಾರ, ದಟ್ಟ ಮಂಜು ಕವಿಯುವ ಸಾಧ್ಯತೆಗಳಿದ್ದು, ಈಶಾನ್ಯ ಭಾಗದಲ್ಲಿ ತುಸು ಮಳೆ ಉಂಟಾಗುವ ಮುನ್ಸೂಚನೆ ಇದೆ.


ಹಿಮಾಚಲ ಪ್ರದೇಶದ ಕೆಲವೊಂದು ಭಾಗಗಳಲ್ಲಿ ಶೀತ ಮಾರುತಗಳು ಬೀಸಲಿದ್ದು, ಅತ್ತ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇಷ್ಟೇ ಅಲ್ಲದೇ, ಹವಾಮಾನ ಇಲಾಖೆ ಇಂದು ಅರುಣಾಚಲ ಪ್ರದೇಶದಲ್ಲಿ ಸಾಧಾರಣ ಮಳೆ, ಹಿಮಪಾತ, ಗಾಳಿ ಗುಡುಗು ಮತ್ತು ಮಿಂಚು ಸಂಭವಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅದೇ ರೀತಿ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ನಾಳೆಯವರೆಗೆ ತುಸು ಮಳೆ ಸುರಿಯಬಹುದು ಎಂದು ಹೇಳಿದೆ.