ಐಪಿಎಲ್ 2025 ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹೊಸ ನಾಯಕನನ್ನು ಘೋಷಿಸಿದೆ. ಮಧ್ಯಪ್ರದೇಶದ ತಾರೆ ರಜತ್ ಪಾಟೀದಾರ್ ತಂಡವನ್ನು ಮುನ್ನಡೆಸಲಿದ್ದಾರೆ.


ಕಳೆದ ಡಿಸೆಂಬರ್ನಲ್ಲಿ ನಡೆದ ಮೆಗಾ ಹರಾಜಿನಲ್ಲಿ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಬಹುದು ಎಂಬ ಊಹಾಪೋಹಗಳು ಇತ್ತು. ಆದರೆ ನಂತರದಲ್ಲಿ ಕೊಹ್ಲಿ ಸ್ವತಃ ನಾಯಕತ್ವದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂಬ ವರದಿಗಳು ಬಂದಿದ್ದವು.
ಪಾಟೀದಾರ್ ಐಪಿಎಲ್ 2024 ರ ಮೊದಲು ಆರ್ಸಿಬಿ ಉಳಿಸಿಕೊಂಡ ಆಟಗಾರರಲ್ಲಿ ಒಬ್ಬರಾಗಿದ್ದರು ಮತ್ತು ಅವರು ಸಯೀದ್ ಮುಶ್ತಾಕ್ ಅಲಿ ಹಾಗೂ ವಿಜಯ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ.