
ಮಂಗಳೂರು : ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಲೋ-ಎಫ್‌ಟಿಎಸ್‌ಸಿ-1) ಆರೋಪಿಗೆ 1 ವರ್ಷ ಸಾದಾ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.


ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಸಜಿಪನಡು ಕಂಚಿನಡ್ಕದ ಜಮಾಲ್ (24) ಶಿಕ್ಷೆಗೊಳಗಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
2024ರ ಅ.5ರಂದು ಅಪ್ರಾಪ್ತ ವಿದ್ಯಾರ್ಥಿನಿಯು ತನ್ನ ಸಂಬಂಧಿಯ ಜೊತೆ ಬೆಳ್ತಂಗಡಿಯ ಐಟಿಐಯೊಂದಕ್ಕೆ ಕುಕ್ಕೇಡಿ ಗೋಳಿಯಂಗಡಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ಅ.10 ಮತ್ತು 15ರಂದು ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 12ರಡಿ ಪೊಕ್ಸ್ ಮತ್ತು ಬಿಎನ್‌ಎಸ್ 78ರಡಿ ಕೇಸು ದಾಖಲಾಗಿತ್ತು.