
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಮುರುಗನ್ ದೇವರಿಗೆ ಮೀಸಲಾದ ಪವಿತ್ರ ಹಬ್ಬವಾಗಿರುವ ಥೈಪೂಸಂ ಸಂದರ್ಭದಲ್ಲಿ ದೇಶಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ X ನಲ್ಲಿ ಅವರು ಶಕ್ತಿ, ಸಮೃದ್ಧಿ ಮತ್ತು ಜ್ಞಾನಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.


ತಮ್ಮ ಸಂದೇಶದಲ್ಲಿ, ಪ್ರಧಾನಮಂತ್ರಿ ಮೋದಿ ಅವರು “ಶ್ರೀ ಮುರುಗನ್ ದೇವರು ದೇಶದ ಜನತೆಗೆ ಸಂತೋಷ, ಆರೋಗ್ಯ ಮತ್ತು ಯಶಸ್ಸನ್ನು ಕೊಟ್ಟು ಆಶೀರ್ವದಿಸಲಿ” ಎಂದಿದ್ದಾರೆ. ಹಾಗೂ ಶಾಂತಿ ಮತ್ತು ಸಕಾರಾತ್ಮಕತೆ ಮಹತ್ವವನ್ನು ಪ್ರಸ್ತಾಪಿಸಿದ್ದಾರೆ.
ಥೈಪೂಸಂ ಹಬ್ಬವನ್ನು ತಮಿಳುನಾಡು ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಭಕ್ತರು ಭಕ್ತಿಭಾವದಿಂದ ಹಾಗೂ ಆಧ್ಯಾತ್ಮಿಕ ಮಹತ್ವದಿಂದ ಆಚರಿಸುತ್ತಾರೆ.