
ದೆಹರಾಡೂನ್: 38ನೇ ರಾಷ್ಟ್ರೀಯ ಕ್ರೀಡಾಕೂಟವು ಈ ವರ್ಷ ಉತ್ತರಾಖಂಡದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಜನವರಿ 28ರಂದು ಉದ್ಘಾಟನೆಗೊಂಡ ಈ ಕ್ರೀಡಾ ಹಬ್ಬ ಫೆಬ್ರವರಿ 14 ರವರೆಗೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ದೆಹರಾಡೂನಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಈ ಕ್ರೀಡಾಕೂಟವನ್ನು ಉದ್ಘಾಟಿಸಿದರು.


ಈ ಕ್ರೀಡಾಕೂಟದಲ್ಲಿ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಆತಿಥೇಯ ರಾಜ್ಯ ಉತ್ತರಾಖಂಡದಿಂದ ಅತ್ಯಧಿಕ ಅಂದರೆ 1,012 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಕ್ರೀಡಾ ಸ್ಪರ್ಧೆಗಳು ದೆಹರಾಡೂನ್, ಹರಿದ್ವಾರ್, ಶಿವಪುರಿ, ತಿಹ್ರಿ, ನೈನಿತಾಲ್, ಹಳ್ದ್ವಾನಿ ಮತ್ತು ರುದ್ರಪುರ ಮೊದಲಾದ ನಗರಗಳಲ್ಲಿ ಆಯೋಜಿಸಲಾಗಿದೆ.
ಈ ಕ್ರೀಡಾಕೂಟದ ಮೂಲಮಂತ್ರ “ಸಂಕಲ್ಪದಿಂದ ಶಿಖರದವರೆಗೆ”. ಇದು ಪಾಲ್ಗೊಳ್ಳುವ ಕ್ರೀಡಾಪಟುಗಳ ದೃಢ ನಿಶ್ಚಯವನ್ನು ತಿಳಿಸುತ್ತದೆ.
38ನೇ ರಾಷ್ಟ್ರೀಯ ಕ್ರೀಡಾಕೂಟದ ರಾಜ್ಯವಾರು ಪದಕ ಪಟ್ಟಿಯ ವಿವರ ಈ ಕೆಳಗಿನಂತಿದೆ;
ಸ್ಥಾನ | ರಾಜ್ಯಗಳು | ಚಿನ್ನ | ಬೆಳ್ಳಿ | ಕಂಚು | ಒಟ್ಟು |
1 | ಕರ್ನಾಟಕ | 28 | 11 | 15 | 54 |
2 | ಸೇವಾ ಕ್ರೀಡಾ ನಿಯಂತ್ರಣ ಮಂಡಳಿ | 27 | 10 | 9 | 46 |
3 | ಮಧ್ಯಪ್ರದೇಶ | 17 | 7 | 10 | 34 |
4 | ಮಹಾರಾಷ್ಟ್ರ | 16 | 35 | 31 | 82 |
5 | ಹರಿಯಾಣ | 12 | 19 | 20 | 51 |
6 | ತಮಿಳುನಾಡು | 11 | 16 | 17 | 44 |
7 | ಮಣಿಪುರ | 11 | 10 | 7 | 28 |
8 | ದೆಹಲಿ | 9 | 10 | 10 | 29 |
9 | ಕೇರಳ | 9 | 9 | 6 | 24 |
10 | ಪಂಜಾಬ್ | 7 | 9 | 16 | 32 |
11 | ರಾಜಸ್ಥಾನ | 7 | 4 | 15 | 26 |
12 | ಉತ್ತರ ಪ್ರದೇಶ | 6 | 6 | 6 | 18 |
13 | ಪಶ್ಚಿಮ ಬಂಗಾಳ | 6 | 5 | 8 | 19 |
14 | ಒಡಿಶಾ | 5 | 6 | 9 | 20 |
15 | ಉತ್ತರಾಖಂಡ್ | 4 | 14 | 15 | 33 |
16 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 4 | 1 | 2 | 7 |
17 | ಝಾರ್ಖಂಡ್ | 3 | 3 | 4 | 10 |
18 | ಆಂಧ್ರಪ್ರದೇಶ | 3 | 1 | 4 | 8 |
19 | ಛತ್ತೀಸ್ಗಡ | 3 | 0 | 5 | 8 |
20 | ಜಮ್ಮು ಮತ್ತು ಕಾಶ್ಮೀರ | 2 | 2 | 4 | 8 |
21 | ಅರುಣಾಚಲ ಪ್ರದೇಶ | 2 | 2 | 3 | 7 |
22 | ಚಂಡೀಗಢ | 2 | 2 | 1 | 5 |
23 | ಗೋವಾ | 2 | 0 | 0 | 2 |
24 | ಗುಜರಾತ್ | 1 | 3 | 8 | 12 |
25 | ತೆಲಂಗಾಣ | 1 | 0 | 3 | 4 |
26 | ಹಿಮಾಚಲ ಪ್ರದೇಶ | 1 | 0 | 1 | 2 |
27 | ಅಸ್ಸಾಂ | 0 | 12 | 8 | 20 |
28 | ಬಿಹಾರ | 0 | 3 | 2 | 5 |
29 | ಮೆಘಾಲಯ | 0 | 1 | 2 | 3 |
30 | ಮಿಜೋರಾಂ | 0 | 0 | 1 | 1 |