ರಾಜ್ಯ

ಬಂಟ್ವಾಳ : ತರಕಾರಿ ಅಂಗಡಿಯಲ್ಲಿ ಕಳವು, ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳರ ಜೇಬಿಗೆ

ಬಂಟ್ವಾಳ: ಚಂದ್ರಿಕಾ ತರಕಾರಿ ಅಂಗಡಿಯಲ್ಲಿ ಕಳ್ಳರು ನುಗ್ಗಿ ನಗದು ದೋಚಿಕೊಂಡು ಹೋದ ಘಟನೆ ಜ.31 ರಂದು ಮೆಲ್ಕಾರ್‌ನಲ್ಲಿ ನಡೆದಿದೆ.

ಮಹಮ್ಮದ್‌ ಶರೀಫ್‌ ಎಂಬುವವರ ಮಾಲಕತ್ವದ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಹಣಕ್ಕಾಗಿ ಕಳ್ಳರು ಹುಡುಕಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿರುವ ಶರೀಫ್‌ ಅವರು ಸರಕಾರಿ ಶಾಲೆಯ ಅಭಿವೃದ್ಧಿಗೆಂದು ತನ್ನ ಅಂಗಡಿಯಲ್ಲಿಟ್ಟಿದ್ದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಅಂದಾಜು 5 ಸಾವಿರಕ್ಕಿಂತ ಅಧಿಕ ಹಣ ಕಾಣಿಕೆ ಡಬ್ಬಿಯಲ್ಲಿತ್ತು ಎನ್ನಲಾಗಿದೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Leave a Response

error: Content is protected !!