ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ 26 ರನ್ಗಳ ಸೋಲಿಗೆ ಗುರಿಯಾಯಿತು. ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿ 172 ರನ್ಗಳ ಗುರಿ ನಿಗದಿ ಮಾಡಿತು. ಇದಕ್ಕೆ ಉತ್ತರವಾಗಿ ಭಾರತ ಕೇವಲ 145 ರನ್ಗಳನ್ನು ಕಲೆಹಾಕಿ 9 ವಿಕೆಟ್ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ವೇಗಿಗಳು ಮಾರಕ ದಾಳಿಯಿಂದ ಭಾರತವನ್ನು ಸಂಕಟಕ್ಕೆ ಸಿಕ್ಕಿಸಿದರು. ಈ ಜಯದ ಮೂಲಕ ಇಂಗ್ಲೆಂಡ್ 5 ಪಂದ್ಯಗಳ ಸರಣಿಯನ್ನು 1-2ಕ್ಕೆ ತಂದು ನಿಲ್ಲಿಸಿತು. 4ನೇ ಟಿ-20 ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇದೇ ಜ.31(ಶುಕ್ರವಾರ) ನಡೆಯಲಿದೆ.
add a comment