ರಾಜ್ಯ

ಪುತ್ತೂರು : ರಕ್ಷಣೆಗೆ ಬಂದ ಅಗ್ನಿಶಾಮಕ ದಳದವರ ಮೇಲೆ ಅಟ್ಯಾಕ್ ಮಾಡಿ ಬೆಕ್ಕು

ಪುತ್ತೂರು : ಬಾವಿಗೆ ಬಿದ್ದು ಮೇಲೆ ಬರಲಾಗದೇ ಒದ್ದಾಡುತ್ತಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಮೇಲೆ ಬೆಕ್ಕು ಮಾರಣಾಂತಿಕವಾಗಿ ದಾಳಿ ಮಾಡಿದ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಿದ್ದರೂಢ ಮತ್ತು ಮೌನೇಶ್ ಅವರಿಗೆ ಗಾಯಗಳಾಗಿದೆ.

ನಿನ್ನೆ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಬೆಕ್ಕೊಂದು ಬಿದ್ದಿತ್ತು, ಬೆಕ್ಕು ಮೇಲೆ ಬರಲಾರದೆ ಬಾವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಹಿನ್ನಲೆ ಮನೆಯವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು, ಇಂದು ಬೆಕ್ಕಿನ ರಕ್ಷಣೆಗೆ ಧಾವಿಸಿ ಬಂದಿದ್ದ ಅಗ್ನಿಶಾಮಕ ದಳ ತಂಡ ಆಗಮಿಸಿತ್ತು, ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಗೊಂಡಿದ್ದು, ಬೆಕ್ಕಿನ ರಕ್ಷಣೆಗೆ ಇಳಿದಿದ್ದ ಅಗ್ನಿಶಾಮಕ ದಳದ ತಂಡದವರು ಬಾವಿಯೊಳಗೆ ಇಳಿದಿದ್ದಾರೆ.

ಈ ವೇಳೆ ಬೆಕ್ಕನ್ನ ಹಿಡಿಯಲು ಹೋದ ಅಗ್ನಿಶಾಮಕ ದಳ ತಂಡದ ಇಬ್ಬರ ಬೆಕ್ಕು ಆಟ್ಯಾಕ್ ಮಾಡಿದೆ. ಸರಿ ಸುಮಾರು ಏಳು ನಿಮಿಷಗಳ ಕಾಲ ಸಿಬ್ಬಂದಿಯ ಕೈಯನ್ನ ಕಚ್ಚಿ ಹಿಡಿದಿದ್ದ ಬೆಕ್ಕು, ಕಚ್ಚಿದ ರೋಷಕ್ಕೆ ಬಿಡಿಸಲಾಗದೇ ಅಗ್ನಿಶಾಮಕದಳದ ಸಿಬ್ಬಂದಿ ಪರದಾಡಬೇಕಾಗಿ ಬಂದಿತ್ತು, ಗಂಭೀರವಾಗಿ ಗಾಯಗೊಂಡಿರುವ ಸಿದ್ದರೂಢ ಮತ್ತು ಮೌನೇಶ್ ಅವರಿಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Leave a Response

error: Content is protected !!