ಮಹಾಕುಂಭಮೇಳದಲ್ಲಿ ಸನ್ಯಾಸಿಯಾದ ಬಾಲಿವುಡ್ ನಟಿ ಮಮತಾ ಕುಲಕರ್ಣಿ

ಮಹಾಕುಂಭಮೇಳದಲ್ಲಿ ಸನ್ಯಾಸಿಯಾದ ಬಾಲಿವುಡ್ ನಟಿ ಮಮತಾ ಕುಲಕರ್ಣಿ

ಉತ್ತರಪ್ರದೇಶ: ಬಾಲಿವುಡ್ ನಟಿ ಮಮತಾ ಕುಲಕರ್ಣಿ ಇದೀಗ ಸನ್ಯಾಸಿನಿಯಾಗಿ ಧೀಕ್ಷೆ ಪಡೆದಿದ್ದಾರೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಈಗ ಸಾಧ್ವಿ ಆಗಿದ್ದಾರೆ.

ಅವರು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕ ಆಗಿದ್ದಾರೆ.ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015 ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಕ ಮಾಡಿದೆ.

ಇದೊಂದು ರೀತಿಯ ಧಾರ್ಮಿಕ ಸ್ಥಾನವಾಗಿದ್ದು ಇಂದು ಪಿಂಡ ಪ್ರಧಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಮತಾ ಕುಲಕರ್ಣಿ ಅವರಿಂದ ಮಾಡಿಸಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಮಾಡಲಾಗುತ್ತದೆ. ಜನವರಿ 24 ರಂದು ಕಿನ್ನರ ಅಖಾರದ ಮಹಾಮಂಡಲೇಶ್ವರಿಯಾಗಿ ಪಟ್ಟಾಭಿಷೇಕ ನೆರವೇರಿತು. ಇದಕ್ಕೂ ಮುನ್ನ ಮಮತಾ ಕುಲಕರ್ಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ರು.

ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಡಾ. ಲಕ್ಷ್ಮೀ ನಾರಾಯಣ ತ್ರಿಪಾಠಿ ಮಹಾರಾಜರು ಆಕೆಯನ್ನ ಮಹಾಮಂಡಲೇಶ್ವರರನ್ನಾಗಿ ಮಾಡಿದ್ದಾರೆ. ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ.

ರಾಜ್ಯ