ರಾಜ್ಯ

ವಿಟ್ಲ: ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್

ವಿಟ್ಲ: ಡ್ರೋನ್ ಒಂದು ಅಪರೇಟರ್ ನಿಯಂತ್ರಣ ತಪ್ಪಿ ರಥದ ಮೇಲಿದ್ದ ಅರ್ಚಕರ ತಲೆಗೆ ಬಡಿದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ನಡೆದಿದೆ.

ನಿನ್ನೆ ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ಒಂದು ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ. ಈ ವೇಳೆ ದೇವರ ಮೂರ್ತಿ ಹೊತ್ತ ಮುಖ್ಯ ಅರ್ಚಕರು ರಥದ ಮೇಲೆ ತೆರಳಿದ್ದರು.

ಡ್ರೋನ್ ಬಡಿದ ವೇಳೆ ದೇವರ ಮೂರ್ತಿ ಹೊತ್ತಿದ್ದ ಅರ್ಚಕರು ಕೊಂಚ ತಬ್ಬಿಬಾದರೂ ಸಾವರಿಸಿಕೊಂಡರು. ಡ್ರೋನ್ ಸ್ವಲ್ಪ ತಪ್ಪಿ ದೇವರ ಮೂರ್ತಿ ಹೊತ್ತಿದ್ದ ಅರ್ಚಕರಿಗೆ ತಾಗಿದ್ದರೆ , ದೇವರ ಮೂರ್ತಿ ಕೆಳಗೆ ಬೀಳುವ ಸಾಧ್ಯತೆ ಇತ್ತು. ಮಹಾರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು, ಡ್ರೋನ್ ಅಪರೇಟರ್ ಹುಚ್ಚಾಟಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Response

error: Content is protected !!