ಆನ್‌ಲೈನ್‌ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ

ಆನ್‌ಲೈನ್‌ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ

ಬ್ರಹ್ಮಾವರ: ಆನ್‌ಲೈನ್‌ ವ್ಯವಹಾರ ಹೆಸರಲ್ಲಿ ಬಾರಕೂರಿನ ಮಹಿಳೆಗೆ ಲಕ್ಷಾಂತರ ರೂ. ಮೋಸ ಮಾಡಿದ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರಕೂರು ಹೊಸಾಳ ನಿವಾಸಿ ದೀಪಶ್ರೀ ಅವರು ಕಾಯ್ನ್ ಸ್ಟೋರ್‌ ಎನ್ನುವ ಟ್ರೇಡಿಂಗ್‌ ಆಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ಟ್ರೇಡಿಂಗ್‌ ಆರಂಭಿಸಿದ್ದರು.

ಮಾಹಿತಿ ಪಡೆಯಲು ಕಸ್ಟ್‌ಮರ್‌ ಸರ್ವೀಸ್‌ಗೆ ಕರೆ ಮಾಡಿದಾಗ ಯಾರೋ ಅಪರಿಚಿತರು ಅವರ ನಂಬ್ರದಿಂದ ಮೆಸೇಜ್‌ ಮಾಡಿ, ಅನಂತರ ಟೆಲಿಗ್ರಾಂ ಮುಖಾಂತರ ಸಂಪರ್ಕಿಸಿ ಅಕೌಂಟ್‌ನಲ್ಲಿ ಹಣವನ್ನು ಠೇವಣಿ ಇರಿಸಿದರೆ ಲಾಭಾಂಶ ನೀಡುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ದೀಪಶ್ರೀ ಹಾಗೂ ಅವರ ತಂಗಿಯ ಖಾತೆಯಿಂದ ಹಂತಹಂತವಾಗಿ 12,78,640 ರೂ. ಅನ್ನು ಸೈಬರ್‌ ವಂಚಕರು ತಮ್ಮ ಖಾತೆಗೆ ವರ್ಗಾಯಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ