ಗುತ್ತಿಗಾರು : ಕಾಡುಹಂದಿ ದಾಳಿ; ಮೂವರಿಗೆ ಗಾಯ

ಗುತ್ತಿಗಾರು : ಕಾಡುಹಂದಿ ದಾಳಿ; ಮೂವರಿಗೆ ಗಾಯ

ಗುತ್ತಿಗಾರು : ಇಲ್ಲಿನ ಪೇಟೆಯಲ್ಲಿ ಕಾಡುಹಂದಿಗಳು ಪೇಟೆಗೆ ಬಂದು ದಾಳಿ ನಡೆಸಿ ವಿದ್ಯಾರ್ಥಿಗಳನ್ನು ಗಾಯಗೊಳಿಸಿದ ಘಟನೆ ಸಂಭವಿಸಿದೆ.

ಗುತ್ತಿಗಾರಿನಿಂದ ಮೊಗ್ರ ಕಡೆಗೆ ಹೋಗುವ ರಸ್ತೆ ಬದಿ ಕಾಡುಹಂದಿಗಳು ಏಕಾಏಕಿ ಬಂದು ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಕರೆದೊಯ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡುಹಂದಿಗಳು ಗುತ್ತಿಗಾರು ಕೆಳಗಿನ ಪೇಟೆಯಿಂದ ಮೇಲಿನವರೆಗೆ ಪೇಟೆಯಲ್ಲೇ ಸಂಚರಿಸಿದೆ. ಕಾಡುಹಂದಿಗಳು ಪೇಟೆಯ ಬದಿಯಲ್ಲೇ ತಿರುಗಾಡುತ್ತಿದ್ದು, ಸಂಬಂಧಪಟ್ಟವರು ತತ್‌ಕ್ಷಣ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯ