ಪಣಂಬೂರು: ಲೈಟರ್ ವಿಚಾರಕ್ಕೆ ಇತ್ತಂಡಗಳ ನಡುವೆ ವಾಗ್ವಾದ ನಡೆದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಕಟ್ಟೆ, ತಣ್ಣಿರುಬಾವಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿ ಪಣಂಬೂರು ಠಾಣೆಯಲ್ಲಿ 2 ಪ್ರತ್ಯೆಕ ಪ್ರಕರಣಗಳು ದಾಖಲಾಗಿದೆ.
ಏನಿದು ಪ್ರಕರಣ:
ಭಾನುವಾರ(ಜ.12) ತಡರಾತ್ರಿ 11:45ರ ವೇಳೆಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಕಟ್ಟೆ, ತಣ್ಣಿರುಬಾವಿ ಎಂಬಲ್ಲಿ ವೆಂಕಟೇಶ, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯಪಾನ ಮಾಡಿಕೊಂಡು ಸಿಗರೇಟ್ ಸೇದುತ್ತಿರುವ ಸಂದರ್ಭ ಸ್ಥಳಕ್ಕೆ ಬಂದ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಸಿಗಾರ್ ಲೈಟರ್ ಕೇಳಿದ್ದಾರೆ. ಈ ವೇಳೆ ಪ್ರಜ್ವಲ್ ಲೈಟರ್ ಅನ್ನು ಪ್ರೀತಂ ತಂಡಕ್ಕೆ ನೀಡಿದ್ದು ಅವರು ಲೈಟರ್ ವಾಪಾಸು ಕೊಡದೇ ಇದ್ದಾಗ ‘ಲೈಟರ್ ಕೊಡಿ’ ಎಂದು ಪ್ರಜ್ವಲ್ ಕೇಳಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಇನ್ನೊಂದು ಗುಂಪು ನೀವು ಯಾಕೆ ಧಮ್ಕಿ ಹಾಕುತ್ತಿರೀ ಎಂದು ಹೇಳಿ ಪ್ರಜ್ವಲ್ ಜತೆಗಿದ್ದ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ ಜೊತೆಗೆ ಅವರೊಂದಿಗಿದ್ದ 5 ಜನರು ಅಲ್ಲೇ ಇದ್ದ ಮರದ ಕೋಲುಗಳಿಂದ ಪ್ರಜ್ವಲ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಎಂಬವವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿ ಪಣಂಬೂರು ಠಾಣೆಯಲ್ಲಿ 2 ಪ್ರತ್ಯೆಕ ಪ್ರಕರಣಗಳು ದಾಖಲಾಗಿದೆ.
add a comment