ರಾಜ್ಯ

ಮಂಗಳೂರು : ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

ಮಂಗಳೂರು: ನಗರದ ರೆಡಿಮೇಡ್‌ ಮಳಿಗೆಯಲ್ಲಿ ಕೆಲಸಗಾರನೇ ಮಾಲಕರ ಹಣ, ಮೊಬೈಲ್‌ ಹಾಗೂ ನೌಕರರಿಗೆ ಸಂಬಂಧಿಸಿದ ಮೊಬೈಲ್‌ ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಪನಕಟ್ಟೆಯಲ್ಲಿ ಶೇಖ್‌ ಬಶೀರ್‌ ಅಹಮ್ಮದ್‌ ಮಾಲಕತ್ವದ ಅಜ್ವದ್‌ ಟೆಕ್ಸ್‌ಟೈಲ್ಸ್‌ ಮತ್ತು ಪರ್ಫ್ಯೂಮ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಫ್ಜಲ್‌ ಖಾನ್‌ ಆರೋಪಿ. ಈತ ಇಲ್ಲಿ 2 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ. ಡಿ.26ರಂದು ಮಧ್ಯಾಹ್ನ ಎಲ್ಲರೂ ನಮಾಜ್‌ಗೆ ಹೋಗಿದ್ದಾಗ ಕ್ಯಾಶ್‌ ಡ್ರಾವರ್‌ ಒಡೆದು 2 ಲಕ್ಷ ರೂ.ಗೂ ಹೆಚ್ಚು ನಗದು ಹಾಗೂ ಇನ್ನೊಬ್ಬ ಕೆಲಸಗಾರ ಮೊಹಮ್ಮದ್‌ ಫಾಜಿಲ್‌ ಎಂಬಾತನ ಸುಮಾರು 8 ಸಾ. ರೂ. ಮೌಲ್ಯದ ಹಾಗೂ ಮಾಲಕರ ಪುತ್ರನ 15 ಸಾವಿರ ರೂ. ಮೌಲ್ಯದ ಮೊಬೈಲ್‌ ಪೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Response

error: Content is protected !!