![](https://newsroomfirst.com/wp-content/uploads/2025/01/540FC7B9-10DD-4A0F-AD23-93F3FD5B2EF8.jpeg)
![](https://newsroomfirst.com/wp-content/uploads/2025/01/540FC7B9-10DD-4A0F-AD23-93F3FD5B2EF8.jpeg)
ಮಂಗಳೂರು : ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಆರೋಪಿಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಜಾಮೀನಿಗೆ ಶ್ಯೂರಿಟಿ ನಿಲ್ಲುತ್ತಿದ್ದ ವಂಚಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮಂಗಳೂರಿನ ಹೊಸ ಪಿಜ್ಜಾ ರೆಸ್ಟೋರೆಂಟ್
ಬಂಧಿತನನ್ನು ಕೆ. ಉಮ್ಮರಬ್ಬ ಮೈದೀನ್ ಎಂದು ಗುರುತಿಸಲಾಗಿದೆ. ಆರೋಪಿ ನಕಲಿ ಆಧಾರ್ ಕಾರ್ಡ್ ಗಳನ್ನು ಬಳಸಿ ಪೊರ್ಜರಿ ದಾಖಲಾತಿಗಳನ್ನು ಸೃಷ್ಟಿಸಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ ಮಾಡುತ್ತಿದ್ದ, ಈ ಆರೋಪಿತನ ದಸ್ತಗಿರಿಗೆ ಮಾನ್ಯ ಪೊಲೀಸ್ ಆಯುಕ್ತರು ಮಂಗಳೂರು ನಗರ ಹಾಗೂ ಉಪ ಪೋಲಿಸ್ ಆಯುಕ್ತರು ಮಂಗಳೂರು ನಗರ ರವರುಗಳು ನೀಡಿದ ಸೂಕ್ತ ಮಾರ್ಗದರ್ಶನ ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪವಿಭಾಗ ರವರ ಸೂಚನೆಯಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರ ನೇತೃತ್ಬದಲ್ಲಿ ಠಾಣಾ ಪಿ ಎಸ್ ಐ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ.
add a comment