ರಾಜ್ಯ

ಮಾಣಿ : ಕಳಚಿ ಬಿದ್ದ ಕೆಎಸ್ಆರ್ ಟಿಸಿ ಬಸ್ ಡಿಸೇಲ್ ಟ್ಯಾಂಕ್

ಮಾಣಿ : ಕೆಎಸ್ ಆರ್ ಟಿಸಿ ಬಸ್ ಒಂದರ ಡಿಸೇಲ್ ಟ್ಯಾಂಕ್ ಕಳಚಿ ಬಿದ್ದ ಘಟನೆ ಮಾಣಿ ಸಮೀಪದ ಮಹಾವೀರ ಎಂಬಲ್ಲಿ ಗುರುವಾರ ನಡೆದಿದೆ.

ಮಂಗಳೂರಿನಿಂದ ಅರಸೀಕೆರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ಮಾಣಿ ಸಮೀಪದ ಮಹಾವೀರ ಎಂಬಲ್ಲಿ ತಲುಪಿದಾಗ ಅದರ ಡೀಸೆಲ್ ಟ್ಯಾಂಕ್ ಏಕಾಏಕಿ ಕಳಚಿ ರಸ್ತೆಗೆ ಕಳಚಿದೆ. ಈ ವೇಳೆ ಟ್ಯಾಂಕ್ ನಿಂದ ಡೀಸೆಲ್ ರಸ್ತೆಗೆ ಚೆಲ್ಲಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಬೇರೊಂದು ಬಸ್ಸಿನಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

Leave a Response

error: Content is protected !!