ರಾಷ್ಟ್ರೀಯ

ಷೇರು ಸಂಗ್ರಹ ಮಾರುಕಟ್ಟೆ – ಚೀನಾವನ್ನು ಹಿಂದಿಕ್ಕಿದ ಭಾರತ; ಷೇರು ಸಂಗ್ರಹ ಮಾರುಕಟ್ಟೆಯಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನ

2024ರಲ್ಲಿ ಭಾರತವು ಏಷ್ಯಾದ IPO ಮಾರಾಟದಲ್ಲಿ ಚೀನಾವನ್ನು ಮೀರಿಸಿದೆ. 2023 ರಲ್ಲಿ IPO ಗಳ ಮೂಲಕ ಭಾರತ ₹11.2 ಬಿಲಿಯನ್ ($11.2 ಬಿಲಿಯನ್) ಸಂಗ್ರಹಿಸಿದೆ.  2023 ರಲ್ಲಿ ಭಾರತವು ₹5.5 ಬಿಲಿಯನ್ ($5.5 ಬಿಲಿಯನ್) ಸಂಗ್ರಹ ಮಾಡಿತ್ತು. ಈ ವರ್ಷ ದುಪ್ಪಟ್ಟು ಸಂಗ್ರಹದೊಂದಿಗೆ ಭಾರತವು ವಿಶ್ವದ ದ್ವಿತೀಯ ಅತಿದೊಡ್ಡ ಷೇರು ಸಂಗ್ರಹ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಪ್ರಮುಖ IPO ಗಳು:

  • ಹ್ಯೂಂಡೈ ಮೋಟಾರ್: IPO ಮೂಲಕ ₹3.3 ಬಿಲಿಯನ್ ಸಂಗ್ರಹಿಸಿದೆ.
  • ಸ್ವಿಗ್ಗಿ: ತನ್ನ IPO ಮೂಲಕ ₹1.3 ಬಿಲಿಯನ್ ಸಂಗ್ರಹಿಸಿದೆ.

ಸರಕಾರದ ಪಾತ್ರ:

ಭಾರತ ಸರಕಾರವು ಮಾಡುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಮುಖ ಕ್ಷೇತ್ರಗಳ ಬೆಳವಣಿಗೆಗೆ ನೀಡುತ್ತಿರುವ ಪ್ರಾಮುಖ್ಯತೆಯ ಪರಿಣಾಮ ಮಾರುಕಟ್ಟೆಯ ಚೈತನ್ಯವನ್ನು ಹೆಚ್ಚಿಸಿದೆ.

ಹೂಡಿಕೆದಾರರ ವಿಶ್ವಾಸ

ಇಲ್ಲಿ ಚಿಲ್ಲರೆ ವ್ಯಾಪಾರದ ಸಕ್ರಿಯ ಭಾಗವಹಿಸುವಿಕೆ, ದೇಶಕ್ಕೆ ಬಂದ ಹಣ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರಿಂದ (FPIs) ಸಕ್ರಿಯ ಪಾಲ್ಗೊಳ್ಳುವಿಕೆಯ ಪರಿಣಾಮ ವಿತರಕರಲ್ಲಿ ವಿಶ್ವಾಸವನ್ನು ಹೆಚ್ಚಿಸಿದ್ದು, ಅಭಿವೃದ್ಧಿಯತ್ತ ಮುನ್ನುಗ್ಗುವ ಹುಮ್ಮಸ್ಸನ್ನು ಹೆಚ್ಚಿಸಿದೆ.

ನಿಯಂತ್ರಕ ಪರಿಸರ:

ಭಾರತ IPO ಗಳಿಗೆ ಪೂರಕವಾಗಿ ನಿಯಂತ್ರಣಾ ಪರಿಸರವನ್ನು ಒದಗಿಸಿದೆ. ಆದರೆ, ಚೀನಾ ಹೇರಿರುವ ಕಠಿಣ ನಿಯಮಗಳಿಂದ ಈ ಬಾರಿ IPO ಕುಸಿತವನ್ನು ಅನುಭವಿಸುತ್ತಿದೆ. ಭಾರತದ IPO ಮಾರುಕಟ್ಟೆ ತನ್ನ ಶಕ್ತಿ ಮತ್ತು ಸ್ಥಿರತೆಯನ್ನು ತೋರಿಸುತ್ತಿದ್ದು, ಪ್ರಾಥಮಿಕ ಷೇರುಗಳ ಮಾರಾಟದ ಮೂಲಕ ಜಾಗತಿಕ ಹೂಡಿಕೆ ಕೇಂದ್ರವಾಗಿ ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡಿದೆ.

2025ರಲ್ಲಿ  ಭಾರತ  IPO ಮೂಲಕ ₹2 ಟ್ರಿಲಿಯನ್ (₹2 ಲಕ್ಷ ಕೋಟಿ) ಮೌಲ್ಯವನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಇದರಿಂದ ಪ್ರೇರಿತಗೊಂಡು, ಇನ್ನೂ ಅನೇಕ ಕಂಪನಿಗಳು ಸಾರ್ವಜನಿಕ IPO ಅನ್ನು ಕಲ್ಪಿಸುವತ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Leave a Response

error: Content is protected !!