ರಾಜ್ಯ

ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

ಮಂಗಳೂರು: ವಿಜಯಪುರ – ಮಂಗಳೂರು ಸೆಂಟ್ರಲ್‌ – ವಿಜಯಪುರ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲು ಸೇವೆಯನ್ನು ಮತ್ತೆ ಆರು ತಿಂಗಳು ವಿಸ್ತರಿಸಲಾಗಿದೆ.

ನಂ. 07377 ವಿಜಯಪುರ – ಮಂಗಳೂರು ಸೆಂಟ್ರಲ್‌ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲು 2025ರ ಜ.1 ರಿಂದ ಜೂ.30 ರ ವರೆಗೆ ತನ್ನ ಸೇವೆಯನ್ನು ಮುಂದುವರಿಸಲಿದೆ. ಈ ರೈಲು ಮಧ್ಯಾಹ್ನ 3.35ರ ಬದಲಾಗಿ 3 ಗಂಟೆಗೆ ವಿಜಯಪುರದಿಂದ ಪ್ರಯಾಣ ಆರಂಭಿಸಿ, ಮರುದಿನ ಬೆಳಗ್ಗೆ 9.50ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ಹೊರಡುವ ಸಮಯ ಮಾತ್ರ ಬದಲಾಗಿದ್ದು, ಮಂಗಳೂರು ತಲುಪುವ ಸಮಯದಲ್ಲಿ ಬದಲಾವಣೆ ಆಗಿಲ್ಲ.
ನಂ. 07378 ಮಂಗಳೂರು ಸೆಂಟ್ರಲ್‌ -ವಿಜಯಪುರ ಡೈಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ 2025ರ ಜ.2 ರಿಂದ ಜುಲೈ 1 ರ ವರೆಗೆ ತನ್ನ ಸೇವೆಯನ್ನು ಮುಂದುವರಿಸಲಿದೆ.

ರೈಲು ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.35ಕ್ಕೆ ಪ್ರಯಾಣ ಆರಂಭಿಸಲಿದ್ದು, ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪಲಿದೆ. ಇಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿಲ್ಲ. ಈ ರೈಲನ್ನು ರೆಗ್ಯುಲರ್‌ ಮಾಡಬೇಕು ಎನ್ನುವ ಬೇಡಿಕೆ ಇರಿಸಲಾಗಿತ್ತು. ಆದರೆ ಮತ್ತೆ ವಿಶೇಷ ರೈಲು ಆಗಿಯೇ ವಿಸ್ತರಿಸಿರುವುದಕ್ಕೆ ರೈಲ್ವೇ ಹೋರಾಟಗಾರರು ಹಾಗೂ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಇದು ವಿಶೇಷ ರೈಲಾಗಿಯೇ ಸಂಚರಿಸುತ್ತಿದೆ. ವಿಶೇಷ ರೈಲಿನಲ್ಲಿ ಸಾಮಾನ್ಯ ರೈಲಿಗಿಂತ ಹೆಚ್ಚಿನ ಟಿಕೆಟ್‌ ದರ ಇರುತ್ತದೆ.

Leave a Response

error: Content is protected !!