
ಅರಂತೋಡು: ಲಾರಿ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರಿಬ್ಬರು ಮೃತಪಟ್ಟ ಘಟನೆ ಸಂಪಾಜೆ ಬಳಿಯ ಕೊಯನಾಡು ಸಮೀಪದ ಚಡಾವು ಎಂಬಲ್ಲಿ ಸಂಭವಿಸಿದೆ.

ಚಿದಾನಂದ ಆಚಾರ್ಯ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಚಿದಾನಂದ ಅವರು ಸ್ಥಳದಲ್ಲಿಯೇ ಮಟ್ಟರೆ, ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರೂ ಮೃತಪಟ್ಟಿದಾರೆ ಎಂದು ತಿಳಿದು ಬಂದಿದೆ.
