ಅರಬ್ಬಿ ಸಮುದ್ರದ ಮೇಲೆ ತ್ರಿಪಕ್ಷೀಯ ವಾಯು ಸಮರಾಭ್ಯಾಸ

ಅರಬ್ಬಿ ಸಮುದ್ರದ ಮೇಲೆ ತ್ರಿಪಕ್ಷೀಯ ವಾಯು ಸಮರಾಭ್ಯಾಸ

2024ರ ಡಿಸೆಂಬರ್ 11ರಂದು ಭಾರತ, ಫ್ರಾನ್ಸ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳ ವಾಯುಪಡೆಗಳು ಅರಬ್ಬಿ ಸಮುದ್ರದ ಮೇಲೆ “ಡೆಸರ್ಟ್ ನೈಟ್” ಎಂಬ ತ್ರಿಪಕ್ಷೀಯ ವಾಯು ಸಮರಾಭ್ಯಾಸವನ್ನು ನಡೆಸಿದವು. ಈ ಅಭ್ಯಾಸವು ಡಿಸೆಂಬರ್ 11 ರಿಂದ ಪ್ರಾರಂಭವಾಗಿ 13 ರವರೆಗೆ ನಡೆಯಿತು. ಮೂರು ದೇಶಗಳ ವಾಯುಪಡೆಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಮತ್ತು ಸಹಕಾರವನ್ನು ಸುಧಾರಿಸುವುದು ಈ ಕಾರ್ಯದ ಮುಖ್ಯ ಉದ್ದೇಶವಾಗಿತ್ತು.

ಭಾರತೀಯ ವಾಯುಪಡೆ ವಿಮಾನಗಳು ಭಾರತದ ಪಶ್ಚಿಮ ಕರಾವಳಿಯಿಂದ ಕಾರ್ಯನಿರ್ವಹಿಸಿದವು. ವಾಯುಪಡೆಯ ಸುಖೋಯ್ – 30 ಎಂಕೆಐ, ಮಿಗ್‌ –29 ಮತ್ತು ಜಾಗ್ವಾರ್ ಯುದ್ಧ ವಿಮಾನಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಿದವು. ಫ್ರಾನ್ಸ್ ಮತ್ತು ಯುಎಇ ವಾಯುಪಡೆಗಳ ಯುದ್ಧ ವಿಮಾನಗಳೂ ಸಹ ಈ ಅಭ್ಯಾಸದಲ್ಲಿ ಪಾಲ್ಗೊಂಡವು.

ಮೂರು ದೇಶಗಳ ವಾಯುಪಡೆಗಳ ನಡುವಿನ ಸಹಯೋಗ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಸುಧಾರಣೆ ಈ ಅಭ್ಯಾಸದ ಮೂಲ ಉದ್ದೇಶವಾಗಿತ್ತು. ಇಂತಹ ಸಮರಾಭ್ಯಾಸಗಳು ಈ ಪ್ರದೇಶದಲ್ಲಿ ಬೆಳೆಯುತ್ತಿರುವ ರಾಜತಾಂತ್ರಿಕ ಮತ್ತು ಸೈನಿಕ ಸಂವಹನಗಳನ್ನು ಮತ್ತು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಅಂತರಾಷ್ಟ್ರೀಯ