
ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ತೆಂಕಿಲದಲ್ಲಿ ವಿವೇಕಾನಂದ ಶಾಲೆಯ ಕ್ಯಾಂಪಸಿನ ತುಸು ದೂರದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಎರಡು ಕಾರುಗಳು ಜಖಂಗೊಂಡಿದೆ.ಮಡಿಕೇರಿಯಿಂದ ಬರುತ್ತಿದ್ದ ನೆಕ್ಸಾನ್ ಕಾರು ಹಾಗೂ ನೆಹರು ನಗರದಿಂದ ದರ್ಬೆಯತ್ತ ಸಾಗುತ್ತಿದ್ದ ಐ೧೦ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ನೆಕ್ಸಾನ್ ಕಾರಿನಲ್ಲಿ ಕುಟುಂಬವೊಂದು ಪ್ರಯಾಣಿಸುತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ನೆಕ್ಸಾನ್ ಮೂರು ಸುತ್ತು ಉರುಳಿದ್ದು, ಕಾರಿನಲ್ಲಿದ್ದ ಮಗು ಸಹಿತ ನಾಲ್ಕು ಮಂದಿ ಅಪಾಯದಿಂದ ಪಾರಾಗಿದ್ದಾರೆ.ಐ10 ಕಾರು ಕೂಡ ದಿಕ್ಕು ಬದಲಿಸಿ ನಿಂತಿದೆ. ಎರಡು ಕಾರಿಗೂ ಹಾನಿಯಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ.
