
ಮಂಗಳೂರು : ಪಾರ್ಟ್ ಟೈಂ ಜಾಬ್ ನೀಡುವುದಾಗಿ 28,18,065 ರೂ. ವಂಚಿಸಿದ್ದ ಇಬ್ಬರು ಖದೀಮರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಅಮೀರ್ ಸುಹೇಲ್ ಮತ್ತು ಸುಹೇಲ್ ಅಹ್ಮದ್ ವಾನಿ ಬಂಧಿತರು.

ಆರೋಪಿಗಳು ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಟೆಲಿಗ್ರಾಂ ಲಿಂಕ್ ವಾಟ್ಸ್ಯಾಪ್ ಮಾಡಿದ್ದರು. ಇದನ್ನು ಓಪನ್ ಮಾಡಿದ ವ್ಯಕ್ತಿ ಅವರು ಹೇಳಿದಂತೆ ವೀಡಿಯೋ ಸ್ಕ್ರೀನ್ ಶಾರ್ಟ್ಸ್ ಕಳುಹಿಸಿ, ಖದೀಮರು ಹೇಳಿದ ಹಣವನ್ನು ಪಾವತಿಸಿ ಮೋಸ ಹೋಗಿದ್ದಾರೆ.ಪ್ರಕರಣದಲ್ಲಿ ಬೆಂಗಳೂರು ಹಾಗೂ ಮೈಸೂರು ಮೂಲದ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಮೀರ್ ಸುಹೇಲ್ ಮತ್ತು ಸುಹೇಲ್ ಅಹ್ಮದ್ ವಾನಿಯನ್ನು ಜಮ್ಮು ಕಾಶ್ಮೀರದ ಕುಲ್ಬುಮ್ ಬಳಿ ದಸ್ತಗಿರಿ ಮಾಡಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸುಹೇಲ್ ಅಹ್ಮದ್ ಮೂಲತಃ ಜಮ್ಮು ಕಾಶ್ಮೀರದವನಾಗಿದ್ದು, ಈತನಿಗೆ ಬೆಂಗಳೂರಿನಲ್ಲಿ ಅಮೀರ್ ಸುಹೈಲ್‌ನ ಪರಿಚಯ ಆಗಿದೆ. ಇಬ್ಬರು ಆರೋಪಿಗಳು ಬ್ಯಾಂಕ್‌ಗಳಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಅಕೌಂಟ್ ಮಾಡಿಸಿಕೊಟ್ಟು ದಿನಕ್ಕೆ 3 ರಿಂದ 5 ಸಾವಿರ ಹಣ ಗಳಿಸುತ್ತಿದ್ದರು ಎಂದು ತನಿಖೆಯಿಂದ ಬಯಲಾಗಿದೆ.
