ಮೂಡಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ.

ಮೂಡಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ.

ಆಳ್ವಾಸ್ ವಿರಾಸತ್ – 2024

ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿನ ಹೆಸರಾಂತ ಶಿಕ್ಷಣ ಸಂಸ್ಥೆ ಆಳ್ವಾಸ್‌ನಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಡೆಯಲಿದೆ. ಕಳೆದ 30 ವರ್ಷಗಳಿಂದಲೂ ವೈವಿಧ್ಯಮಯವಾಗಿ ವಿರಾಸತ್ ಅನ್ನು ಆಚರಿಸಿಕೊಂಡು ಬರುತ್ತಿರುವ ಸಂಸ್ಥೆಯು, ಈ ವರ್ಷ ತನ್ನ 30 ನೇ ವರ್ಷದ ಆಳ್ವಾಸ್ ವಿರಾಸತ್ ಅನ್ನು ಆಚರಿಸುತ್ತಿದೆ.

ಕಾರ್ಯಕ್ರಮವು ಡಿ. 10 ರಿಂದ ಪ್ರಾರಂಭವಾಗಿ ಡಿ. 15 ರವರೆಗೆ ನಡೆಯಲಿದೆ. ವಿರಾಸತ್‌ ಅನ್ನು ವಿಜೃಂಭಣೆಯಿಂದ ಆಚರಿಸುವುದಕ್ಕೆ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿರುವ ವಿದ್ಯಾಗಿರಿಯು, ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರಮೇಳ, ಕೃಷಿ ಮೇಳ, ಫಲ- ಪುಷ್ಪ ಮೇಳ, ಚಿತ್ರಕಲಾ ಮೇಳಗಳು ಮತ್ತು ಇನ್ನೂ ಅನೇಕ ವಿಧದ ಮಾರಾಟ ಮೇಳಗಳು ದಿನಪೂರ್ತಿ ತೆರೆದಿರುತ್ತವೆ. ಅನೇಕ ಜಾನಪದ ಕಲಾತಂಡಗಳು ಮತ್ತು ಕಲಾವಿದರಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.

Uncategorized ರಾಜ್ಯ ರಾಷ್ಟ್ರೀಯ