ನವದೆಹಲಿ: 2026ರ ಗಣರಾಜ್ಯೋತ್ಸವ ಪರೇಡ್‌ನ ಅತ್ಯುತ್ತಮ ಪಥಸಂಚಲನ ತಂಡಗಳು ಮತ್ತು ಸ್ತಬ್ಧಚಿತ್ರಗಳ ಫಲಿತಾಂಶವನ್ನು ಘೋಷಿಸಲಾಗಿದೆ. ಈ ಬಾರಿ ಭಾರತೀಯ ನೌಕಾಪಡೆ ಮತ್ತು ಮಹಾರಾಷ್ಟ್ರದ ಸ್ತಬ್ಧಚಿತ್ರಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಸೇನಾ ವಿಭಾಗದಲ್ಲಿ ನೌಕಾಪಡೆಗೆ ಪ್ರಥಮ ಮೂರು ಸಶಸ್ತ್ರ ಪಡೆಗಳ ಪೈಕಿ ಭಾರತೀಯ ನೌಕಾಪಡೆ (Indian Navy) ಅತ್ಯುತ್ತಮ ಪಥಸಂಚಲನ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಮತ್ತು ಇತರ ಪೂರಕ ಪಡೆಗಳ ವಿಭಾಗದಲ್ಲಿ ದೆಹಲಿ ಪೊಲೀಸ್ ತಂಡ ಪ್ರಥಮ ಸ್ಥಾನ ಪಡೆದಿದೆ.

ರಾಜ್ಯಗಳ ಸ್ತಬ್ಧಚಿತ್ರ ವಿಭಾಗ: ಮಹಾರಾಷ್ಟ್ರಕ್ಕೆ ಜಯ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಈ ಕೆಳಗಿನ ರಾಜ್ಯಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ:
- ಪ್ರಥಮ ಸ್ಥಾನ: ಮಹಾರಾಷ್ಟ್ರ (ಗಣೇಶೋತ್ಸವ: ಆತ್ಮನಿರ್ಭರತೆಯ ಸಂಕೇತ ಸ್ತಬ್ಧಚಿತ್ರಕ್ಕಾಗಿ).

- ದ್ವಿತೀಯ ಸ್ಥಾನ: ಜಮ್ಮು ಮತ್ತು ಕಾಶ್ಮೀರ (ಕೈಮಗ್ಗ ಮತ್ತು ಜಾನಪದ ನೃತ್ಯಗಳ ಪ್ರದರ್ಶನಕ್ಕಾಗಿ).

- ತೃತೀಯ ಸ್ಥಾನ: ಕೇರಳ (ವಾಟರ್ ಮೆಟ್ರೋ ಮತ್ತು ಡಿಜಿಟಲ್ ಸಾಕ್ಷರತೆಯ ‘ಆತ್ಮನಿರ್ಭರ ಕೇರಳ’ ವಿನ್ಯಾಸಕ್ಕಾಗಿ).

ಕೇಂದ್ರ ಸಚಿವಾಲಯ ಮತ್ತು ಇಲಾಖೆಗಳ ಪೈಕಿ ಸಂಸ್ಕೃತಿ ಸಚಿವಾಲಯದ ‘ವಂದೇ ಮಾತರಂ – ರಾಷ್ಟ್ರದ ಆತ್ಮದ ಧ್ವನಿ’ ಸ್ತಬ್ಧಚಿತ್ರವು ಅತ್ಯುತ್ತಮ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ವಿಶೇಷ ಬಹುಮಾನಕ್ಕೆ ಪಾತ್ರವಾಗಿದೆ.

ಜನಪ್ರಿಯ ಆಯ್ಕೆ (Popular Choice Awards) MyGov ಪೋರ್ಟಲ್ ಮೂಲಕ ನಡೆಸಲಾದ ಆನ್‌ಲೈನ್ ಮತದಾನದಲ್ಲಿ ಜನರು ನೀಡಿದ ತೀರ್ಪಿನ ಫಲಿತಾಂಶ ಹೀಗಿದೆ:
- ಅತ್ಯುತ್ತಮ ಪಥಸಂಚಲನ (ಸೇವೆಗಳು): ಅಸ್ಸಾಂ ರೆಜಿಮೆಂಟ್.

- ಅತ್ಯುತ್ತಮ ಪಥಸಂಚಲನ (CAPF): ಸಿಆರ್‌ಪಿಎಫ್ (CRPF).

- ಅತ್ಯುತ್ತಮ ಸ್ತಬ್ಧಚಿತ್ರ (ರಾಜ್ಯಗಳು): ಗುಜರಾತ್ (ಸ್ವದೇಶಿ ಮಂತ್ರ – ಆತ್ಮನಿರ್ಭರತೆ: ವಂದೇ ಮಾತರಂ). ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನ ಇವೆ.

- ಅತ್ಯುತ್ತಮ ಸ್ತಬ್ಧಚಿತ್ರ (ಸಚಿವಾಲಯ): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ರಾಷ್ಟ್ರೀಯ ಶಿಕ್ಷಣ ನೀತಿ 2020).

