ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮ ಪ್ರಶಸ್ತಿ’ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ ‘ತೆರೆಮರೆಯ ಸಾಧಕರಿಗೆ’ ಹೆಚ್ಚಿನ ಆದ್ಯತೆ ನೀಡಿದೆ.
ಕರ್ನಾಟಕದ ಪದ್ಮಶ್ರೀ ಪ್ರಶಸ್ತಿ ವಿಜೇತರ ವಿವರ:
- ಅಂಕೇಗೌಡ ಎಂ. (ಸಮಾಜ ಸೇವೆ)
- ಡಾ. ಸುರೇಶ್ ಹನಗವಾಡಿ (ವೈದ್ಯಕೀಯ)
- ಎಸ್. ಜಿ. ಸುಶೀಲಮ್ಮ (ಸಮಾಜ ಸೇವೆ)
- ಡಾ. ಪ್ರಭಾಕರ್ ಕೋರೆ (ಶಿಕ್ಷಣ ಮತ್ತು ಸಾಹಿತ್ಯ)
- ಶಶಿಶೇಖರ್ ವೆಂಪತಿ (ಸಾಹಿತ್ಯ ಮತ್ತು ಶಿಕ್ಷಣ)
- ಶುಭಾ ವೆಂಕಟೇಶ್ ಅಯ್ಯಂಗಾರ್ (ವಿಜ್ಞಾನ ಮತ್ತು ಇಂಜಿನಿಯರಿಂಗ್)
- ಟಿ.ಟಿ. ಜಗನ್ನಾಥನ್ (ಮರಣೋತ್ತರ) ವಾಣಿಜ್ಯ ಮತ್ತು ಕೈಗಾರಿಕೆ
ಪದ್ಮಭೂಷಣ ಗೌರವ:. ಕರ್ನಾಟಕದ ಖ್ಯಾತ ಬಹುಭಾಷಾ ಪಂಡಿತ ಮತ್ತು ಸಾಹಿತ್ಯ ದಿಗ್ಗಜ ಶತಾವಧಾನಿ ಆರ್. ಗಣೇಶ್ ಅವರಿಗೆ ಕಲಾ ಕ್ಷೇತ್ರದಲ್ಲಿನ ಅವರ ಅಸಾಧಾರಣ ಸಾಧನೆಗಾಗಿ ಈ ಬಾರಿಯ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಾಧಕರಿಗೆ ರಾಜ್ಯದಾದ್ಯಂತ ಗಣ್ಯರು ಮತ್ತು ಸಾರ್ವಜನಿಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

