ವಿರಾಟ್ ಕೊಹ್ಲಿ ಹೋರಾಟದ ಶತಕ ವ್ಯರ್ಥ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಸೋಲು

ವಿರಾಟ್ ಕೊಹ್ಲಿ ಹೋರಾಟದ ಶತಕ ವ್ಯರ್ಥ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಸೋಲು

​ಇಂದೋರ್: ಕಿಂಗ್ ಕೊಹ್ಲಿಯ ಅಪ್ರತಿಮ ಶತಕದ ಹೋರಾಟದ ಹೊರತಾಗಿಯೂ, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 41 ರನ್‌ಗಳ ಸೋಲು ಅನುಭವಿಸಿದೆ. ಈ ಮೂಲಕ ತವರಿನಲ್ಲಿ ಪ್ರಥಮ ಬಾರಿಗೆ ಕಿವೀಸ್ ಪಡೆ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯನ್ನು ಕೈಚೆಲ್ಲುದೆ.

ಇಂದು ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, 46 ಓವರ್‌ಗಳಲ್ಲಿ 296 ರನ್‌ಗಳಿಗೆ ಸರ್ವಪತನ ಕಂಡಿತು.

ಕೊಹ್ಲಿ ಏಕಾಂಗಿ ಹೋರಾಟ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದೆ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ, 108 ಎಸೆತಗಳಲ್ಲಿ 124 ರನ್ ಚಚ್ಚಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಡ್ರೈವ್‌ಗಳು ಮತ್ತು ಭರ್ಜರಿ ಸಿಕ್ಸರ್‌ಗಳಿದ್ದವು. ಪಂದ್ಯದ ಮೇಲೆ ಹಿಡಿತ ಸಾಧಿಸಲು ಕೊಹ್ಲಿ ಶತಪ್ರಯತ್ನ ನಡೆಸಿದರೂ, ಅವರಿಗೆ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ.

ಐತಿಹಾಸಿಕ ಸರಣಿ ಸೋಲು​ ಕೊನೆಯ ಹಂತದಲ್ಲಿ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ಭಾರತದ ಗೆಲುವಿನ ಆಸೆ ಕಮರಿತು. ನ್ಯೂಜಿಲೆಂಡ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಭಾರತದ ಮಧ್ಯಮ ಕ್ರಮಾಂಕ ತತ್ತರಿಸಿತು. ಇದರೊಂದಿಗೆ ಭಾರತ ತನ್ನದೇ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಬಾರಿಗೆ ಏಕದಿನ ಸರಣಿ ಸೋತಂತಾಗಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ