ಅಟ್ಲಾಂಟಿಕ್ ಸಾಗರದಲ್ಲಿ ಹೈಡ್ರಾಮಾ: ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ ಮಿಲಿಟರಿ

ಅಟ್ಲಾಂಟಿಕ್ ಸಾಗರದಲ್ಲಿ ಹೈಡ್ರಾಮಾ: ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ ಮಿಲಿಟರಿ

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ತೈಲ ಸಾಗಿಸುತ್ತಿದ್ದ ಆರೋಪದ ಮೇಲೆ, ರಷ್ಯಾದ ಧ್ವಜ ಹೊಂದಿರುವ ‘ಮರಿನೆರಾ’ (Marinera) ಎಂಬ ಬೃಹತ್ ತೈಲ ಟ್ಯಾಂಕರ್ ಅನ್ನು ಅಮೆರಿಕ ಮಿಲಿಟರಿ ವಶಪಡಿಸಿಕೊಂಡಿದೆ. ಸ್ಕಾಟ್ಲೆಂಡ್‌ನ ವಾಯುವ್ಯ ಭಾಗದ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಮೆರಿಕದ ಯುರೋಪಿಯನ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಫೆಡರಲ್ ನ್ಯಾಯಾಲಯ ಹೊರಡಿಸಿದ ವಾರಂಟ್ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ರಷ್ಯಾದ ಸಾರಿಗೆ ಸಚಿವಾಲಯವು ಅಮೆರಿಕದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.

  • ರಷ್ಯಾದ ವಾದ: “ಯಾವುದೇ ದೇಶಕ್ಕೆ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಮತ್ತೊಂದು ದೇಶದ ನೋಂದಾಯಿತ ಹಡಗಿನ ಮೇಲೆ ಬಲಪ್ರಯೋಗ ಮಾಡುವ ಹಕ್ಕಿಲ್ಲ. ಮರಿನೆರಾ ಹಡಗು ಕಳೆದ ತಿಂಗಳು ರಷ್ಯಾದ ಧ್ವಜದ ಅಡಿಯಲ್ಲಿ ಚಲಿಸಲು ತಾತ್ಕಾಲಿಕ ಅನುಮತಿ ಪಡೆದಿತ್ತು,” ಎಂದು ರಷ್ಯಾ ಹೇಳಿದೆ.
  • ಅಮೆರಿಕದ ಪಡೆಗಳು ಹಡಗನ್ನು ಪ್ರವೇಶಿಸಿದ ನಂತರ ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡಿದೆ ಎಂದು ರಷ್ಯಾ ಆತಂಕ ವ್ಯಕ್ತಪಡಿಸಿದೆ.

ಇದೇ ಸಮಯದಲ್ಲಿ ಕೆರಿಬಿಯನ್ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದ ಅಮೆರಿಕದ ಸದರ್ನ್ ಕಮಾಂಡ್, ‘ಸೋಫಿಯಾ’ (Sophia) ಎಂಬ ಹೆಸರಿನ ಮತ್ತೊಂದು ಅಕ್ರಮ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಈ ಹಡಗು ಯಾವುದೇ ದೇಶದ ಧ್ವಜ ಹೊಂದಿರದ (stateless) ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಹಡಗಾಗಿದೆ ಎಂದು ಅಮೆರಿಕ ತಿಳಿಸಿದೆ.

ಅಂತರಾಷ್ಟ್ರೀಯ