ಬೆಂಗಳೂರು: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಹಾಗೂ ಪರಿಸರವಾದಿ ರಿಕ್ಕಿ ಕೇಜ್ ಅವರು ತಮ್ಮ ಮನೆಯಲ್ಲಿ ನಡೆದ ಕಳ್ಳತನಕ್ಕೆ ಆನ್‌ಲೈನ್ ಆಹಾರ ವಿತರಣಾ ವೇದಿಕೆ ‘ಜೋಮ್ಯಾಟೋ’ ದ ಡೆಲಿವರಿ ಬಾಯ್ ಕಾರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಡೆಲಿವರಿ ಬಾಯ್ ‘ಸಂಪ್ ಕವರ್ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಿಸಿಟಿವಿ ವೀಡಿಯೋ ಹಂಚಿಕೊಂಡಿದ್ದಾರೆ.

“ನನ್ನ ಮನೆಯಲ್ಲಿ ಕಳ್ಳತನವಾಗಿದೆ! ಆತ್ಮೀಯ @zomato @zomatocare, ನಿಮ್ಮ ಡೆಲಿವರಿ ಬಾಯ್‌ಗಳಲ್ಲಿ ಒಬ್ಬರು ಗುರುವಾರ ನಮ್ಮ ಮನೆಗೆ ಪ್ರವೇಶಿಸಿ ಸಂಪ್ ಕವರ್ ಕದ್ದಂತೆ ಕಾಣುತ್ತಿದೆ. ಇದು ಸಂಜೆ 6 ಗಂಟೆಗೆ ನಡೆದಿದೆ. ಅವರದ್ದು ಎಂತಹ ಧೈರ್ಯ!” ಎಂದು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
https://www.instagram.com/p/DSMVZLgDAWI/?igsh=ZjZkdmkyZDU5aDk4
ಈ ಘಟನೆಯ ಕುರಿತು ರಿಕ್ಕಿ ಕೇಜ್ ಅವರು ಕಳ್ಳತನದ ದೃಶ್ಯಗಳನ್ನು ದಾಖಲಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಆರೋಪಿಯ ಮುಖದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುವಂತೆ ಜೋಮ್ಯಾಟೋ ಮತ್ತು ಬೆಂಗಳೂರು ನಗರ ಪೊಲೀಸ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ, ಸಾರ್ವಜನಿಕರು ಸಹ ಇಂತಹ ಘಟನೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

