IND VS SA 2ND T20: ದಕ್ಷಿಣ ಆಫ್ರಿಕಾ ವಿರದ್ಧ ಭಾರತಕ್ಕೆ 51 ರನ್‌ಗಳ ಸೋಲು: ಸರಣಿ 1-1 ಸಮಬಲ

IND VS SA 2ND T20: ದಕ್ಷಿಣ ಆಫ್ರಿಕಾ ವಿರದ್ಧ ಭಾರತಕ್ಕೆ 51 ರನ್‌ಗಳ ಸೋಲು: ಸರಣಿ 1-1 ಸಮಬಲ

ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಈ ರೋಚಕ ಪಂದ್ಯವು ನಿನ್ನೆ (ಗುರುವಾರ) ಚಂಡೀಗಢದಲ್ಲಿ ನಡೆಯಿತು.ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ನಂತರ, ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 213 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

214 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆಫ್ರಿಕಾದ ವೇಗದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಪವರ್‌ಪ್ಲೇ ಒಳಗೇ ಕೇವಲ 32 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿ, ಆತಿಥೇಯ ಭಾರತವನ್ನು ಒತ್ತಡಕ್ಕೆ ಸಿಲುಕಿಸಿದರು. ಹೆಚ್ಚುತ್ತಿರುವ ನಿಗದಿತ ರನ್ ರೇಟ್ ಅನ್ನು ತಲುಪಲು ಭಾರತೀಯ ಬ್ಯಾಟರ್‌ಗಳು ವಿಫಲರಾಗಿ, ಕೇವಲ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್:

  • ದಕ್ಷಿಣ ಆಫ್ರಿಕಾ: 213/4 (20 ಓವರ್‌ಗಳಲ್ಲಿ) – (ಡಿ ಕಾಕ್ ಭರ್ಜರಿ ಅರ್ಧಶತಕ)
  • ಭಾರತ: 162 ಆಲೌಟ್ (19.1 ಓವರ್‌ಗಳಲ್ಲಿ)
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ