ಋತುಚಕ್ರ ರಜೆ: ತಡೆಯಾಜ್ಞೆ ನೀಡಿ ಕೆಲವೇ ಗಂಟೆಗಳಲ್ಲಿ ಆದೇಶದ ಮೇಲಿನ ತಡೆ ಹಿಂಪಡೆದ ಹೈಕೋರ್ಟ್!

ಋತುಚಕ್ರ ರಜೆ: ತಡೆಯಾಜ್ಞೆ ನೀಡಿ ಕೆಲವೇ ಗಂಟೆಗಳಲ್ಲಿ ಆದೇಶದ ಮೇಲಿನ ತಡೆ ಹಿಂಪಡೆದ ಹೈಕೋರ್ಟ್!

ಬೆಂಗಳೂರು: (ಡಿ. 10) – ರಾಜ್ಯ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಋತುಚಕ್ರ ರಜೆ (Menstrual Leave) ಕಡ್ಡಾಯಗೊಳಿಸಿ ಹೊರಡಿಸಿದ್ದ ಅಧಿಸೂಚನೆಗೆ ತಡೆ ನೀಡಿ ಕೆಲವೇ ಗಂಟೆಗಳ ನಂತರ, ಕರ್ನಾಟಕ ಹೈಕೋರ್ಟ್ ತನ್ನ ಆದೇಶವನ್ನು ಮಂಗಳವಾರ ಹಿಂಪಡೆದಿದೆ.

ನ್ಯಾಯಮೂರ್ತಿ ಜ್ಯೋತಿ ಎಂ. ಅವರಿದ್ದ ಪೀಠವು ಬೆಳಗ್ಗೆ ತಡೆ ಆದೇಶ ನೀಡಿತ್ತು. ಆದರೆ, ಊಟದ ವಿರಾಮದ ನಂತರ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು ನ್ಯಾಯಾಲಯದ ಮುಂದೆ ಹಾಜರಾಗಿ, ತಡೆ ಆದೇಶವನ್ನು ಮರುಪರಿಶೀಲಿಸುವಂತೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಸರ್ಕಾರದ ನಿಲುವನ್ನು ಕೇಳದೆಯೇ ತಡೆ ನೀಡಲಾಗಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು.

ಎಜಿ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ತಕ್ಷಣವೇ ತನ್ನ ಮಧ್ಯಂತರ ತಡೆ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿತು. ಸರ್ಕಾರಿ ಆದೇಶದ ಕುರಿತಾದ ಅರ್ಜಿಗಳ ವಿಚಾರಣೆಯನ್ನು ಇಂದಿಗೆ (ಡಿ.10) ಮುಂದೂಡಲಾಗಿದೆ.

ರಾಜ್ಯ