ಇಂಡಿಗೋ ಕಾರ್ಯಾಚರಣೆ ಮತ್ತೆ ಸಹಜ ಸ್ಥಿತಿಗೆ ಮರಳಿದೆ – ಸಿಇಒ ಪೀಟರ್ ಎಲ್ಬರ್ಸ್ ಸ್ಪಷ್ಟನೆ

ಇಂಡಿಗೋ ಕಾರ್ಯಾಚರಣೆ ಮತ್ತೆ ಸಹಜ ಸ್ಥಿತಿಗೆ ಮರಳಿದೆ – ಸಿಇಒ ಪೀಟರ್ ಎಲ್ಬರ್ಸ್ ಸ್ಪಷ್ಟನೆ

ಮುಂಬೈ: ಡಿಸೆಂಬರ್ 9 ರಂದು ಉಂಟಾದ ಪ್ರಮುಖ ಕಾರ್ಯಾಚರಣೆಯ ಅಡಚಣೆಯ ನಂತರ ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ವಿಮಾನಯಾನ ಸಂಸ್ಥೆಯು ‘ತಮ್ಮ ಕಾರ್ಯಾಚರಣೆಗಳು ಸ್ಥಿರವಾಗಿವೆ ಮತ್ತು ಅದು ಮತ್ತೆ ತನ್ನ ಸ್ಥಿತಿಗೆ ಮರಳಿದೆ’ ಎಂದು ಘೋಷಿಸಿದೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಪೀಟರ್ ಎಲ್ಬರ್ಸ್ ಅವರು ವಿಡಿಯೋ ಸಂದೇಶದ ಮೂಲಕ ಈ ಸ್ಪಷ್ಟನೆಯನ್ನು ನೀಡಿದ್ದಾರೆ.

ಇಂಡಿಗೋ ಕಾರ್ಯಾಚರಣೆಗಳು ಸಂಪೂರ್ಣವಾಗಿ ಸ್ಥಿರಗೊಂಡಿದ್ದು, ನಿಗದಿತ ವಿಮಾನಗಳು ಈಗ ಹೊಂದಾಣಿಕೆ ಮಾಡಲಾದ ಜಾಲದೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ವಿಮಾನಗಳು ರದ್ದುಗೊಂಡ ಅಥವಾ ತಡವಾದ ಲಕ್ಷಾಂತರ ಗ್ರಾಹಕರಿಗೆ ಈಗಾಗಲೇ ಸಂಪೂರ್ಣ ಹಣ ಮರುಪಾವತಿ ಮಾಡಲಾಗಿದೆ ಮತ್ತು ಈ ಪ್ರಕ್ರಿಯೆಯು ಪ್ರತಿದಿನವೂ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಪರಿಹಾರದ ಬಗ್ಗೆ ಮೌನ!

ಆದರೆ, ಕೊನೆಯ ಕ್ಷಣದಲ್ಲಿ ವಿಮಾನಗಳು ರದ್ದುಗೊಂಡ ಅಥವಾ ಹೆಚ್ಚು ವಿಳಂಬವಾದ ಗ್ರಾಹಕರಿಗೆ ನೀಡಬೇಕಾದ ಪರಿಹಾರದ (Compensation) ಕುರಿತು ಸಿಇಒ ಎಲ್ಬರ್ಸ್ ಅವರು ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ.

ಎಲ್ಬರ್ಸ್ ಅವರು ವಿಡಿಯೋ ಸಂದೇಶದಲ್ಲಿ, ‘ಡಿಸೆಂಬರ್ 10-15 ರ ನಡುವೆ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆ ನೀಡಲಾಗಿತ್ತು. ಆದರೆ, ಡಿಸೆಂಬರ್ 9 ರ ಇಂದೇ ನಮ್ಮ ಕಾರ್ಯಾಚರಣೆಗಳು ಸಂಪೂರ್ಣವಾಗಿ ಸ್ಥಿರಗೊಂಡಿವೆ ಎಂದು ನಾನು ದೃಢೀಕರಿಸುತ್ತೇನೆ,’ ಎಂದು ಹೇಳಿದ್ದಾರೆ. ವಿಮಾನಯಾನ ಸಂಸ್ಥೆಯು ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತದೆ ಮತ್ತು ಅಡಚಣೆಯಿಂದ ತೊಂದರೆ ಅನುಭವಿಸಿದ ಎಲ್ಲರಿಗೂ ನಾವು ಕ್ಷಮೆಯಾಚಿಸುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.ಅಡಚಣೆ ಉಂಟಾದಾಗ ಮೊದಲು ಸಿಲುಕಿಕೊಂಡಿದ್ದ ಮತ್ತು ವಿಳಂಬಗೊಂಡಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಸುರಕ್ಷಿತವಾಗಿ ತಲುಪಿಸುವುದು ತಮ್ಮ ಮೊದಲ ಆದ್ಯತೆಯಾಗಿತ್ತು. ನಂತರ, ಹಣ ಮರುಪಾವತಿ ಪ್ರಕ್ರಿಯೆ ಆರಂಭಿಸಲಾಯಿತು, ಅದು ಈಗಲೂ ನಡೆಯುತ್ತಿದೆ ಎಂದು ಎಲ್ಬರ್ಸ್ ವಿವರಿಸಿದ್ದಾರೆ.

ಅಂತರಾಷ್ಟ್ರೀಯ ರಾಷ್ಟ್ರೀಯ