ಬಾಂಬ್ ಬೆದರಿಕೆ: ಕುವೈತ್-ಹೈದರಾಬಾದ್ ಇಂಡಿಗೋ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

ಬಾಂಬ್ ಬೆದರಿಕೆ: ಕುವೈತ್-ಹೈದರಾಬಾದ್ ಇಂಡಿಗೋ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

ಮುಂಬೈ (ಡಿಸೆಂಬರ್ 2): ಕುವೈತ್‌ನಿಂದ ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನ 6E-1234 ವಿಮಾನದಲ್ಲಿ “ಮಾನವ ಬಾಂಬ್” ಇದೆ ಎಂದು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ, ವಿಮಾನವು ಮಂಗಳವಾರ ಬೆಳಿಗ್ಗೆ 7.45ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈನಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದೆ.

ವಿಮಾನ ಯಶಸ್ವಿಯಾಗಿ ಇಳಿದಿದ್ದು, ಹೆಚ್ಚಿನ ಭದ್ರತಾ ಪರಿಶೀಲನೆಗಾಗಿ ಅದನ್ನು ಐಸೋಲೇಶನ್ ಬೇ ಗೆ ಸ್ಥಳಾಂತರಿಸಲಾಗಿದೆ.

ವಿಮಾನಕ್ಕೆ ಇ-ಮೇಲ್ ಮೂಲಕ ಬೆದರಿಕೆವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಇ-ಮೇಲ್ ಬೆದರಿಕೆ ಬಂದ ತಕ್ಷಣ, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಹೈದರಾಬಾದ್‌ಗೆ ಹೋಗುವ ಬದಲು ಮುಂಬೈಗೆ ತಿರುಗಿಸಿದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.

ವಿಮಾನದಲ್ಲಿನ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಭದ್ರತಾ ಸಿಬ್ಬಂದಿ ವಿಮಾನದೊಳಗೆ ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ.ಈ ಬೆದರಿಕೆ ಕರೆಯ ಮೂಲ ಮತ್ತು ಇದರ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ