ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ: ಡಿ.8 ರಿಂದ ಅರೈವಲ್ ಪಿಕ್-ಅಪ್‌ನಲ್ಲಿ ಹೆಚ್ಚು ಕಾಲ ನಿಂತರೆ ಶುಲ್ಕ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ: ಡಿ.8 ರಿಂದ ಅರೈವಲ್ ಪಿಕ್-ಅಪ್‌ನಲ್ಲಿ ಹೆಚ್ಚು ಕಾಲ ನಿಂತರೆ ಶುಲ್ಕ!

ಬೆಂಗಳೂರು: (ಡಿಸೆಂಬರ್ 2): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುಗಮ ಸಂಚಾರ ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಡಿಸೆಂಬರ್ 8 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅರೈವಲ್ ಪಿಕ್-ಅಪ್ (Arrival Pick-up) ವಲಯದಲ್ಲಿ ಎಂಟು ನಿಮಿಷಗಳ ಉಚಿತ ಮಿತಿಯನ್ನು ಮೀರಿದ ವಾಹನಗಳಿಗೆ ಪ್ರವೇಶ ಶುಲ್ಕ (Entry Fee) ವಿಧಿಸಲು ವಿಮಾನ ನಿಲ್ದಾಣದ ನಿರ್ವಾಹಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ನಿರ್ಧರಿಸಿದೆ.

8 ನಿಮಿಷ ಉಚಿತ ಮಿತಿ, ಮೀತಿ ಮೀರಿದರೆ ಹೆಚ್ಚುವರಿ ಶುಲ್ಕ
ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆಯ ಪ್ರಕಾರ, ಪ್ರಯಾಣಿಕರ ಓಡಾಟವನ್ನು ಸುಧಾರಿಸಲು, ದಟ್ಟಣೆಯನ್ನು ತಗ್ಗಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಈ “ವರ್ಧಿತ ಪಿಕ್-ಅಪ್ ಕ್ರಮಗಳನ್ನು” ಪರಿಚಯಿಸಲಾಗುತ್ತಿದೆ.
ದಂಡದ ಮೂಲಕ ಶಿಸ್ತು ಪಾಲನೆ
ಬಿಐಎಎಲ್ ಸಂಸ್ಥೆಯು ಶಿಸ್ತು ಜಾರಿಗೊಳಿಸಲು, ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ವಾಹನ ನಿಲ್ಲಿಸುವ ಸಮಯವನ್ನು ಕಡಿಮೆಗೊಳಿಸಲು ಲೇನ್ ವಿಭಜನಾ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. “ಇದು ಟರ್ಮಿನಲ್‌ಗಳ ಮುಂಭಾಗದಲ್ಲಿರುವ ಪಿಕ್-ಅಪ್ ವಲಯದ ದುರ್ಬಳಕೆಯನ್ನು ತಡೆಯಲು ಮತ್ತು ಕರ್ಬ್‌ಸೈಡ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,” ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಹೊಸ ನಿಯಮದಿಂದಾಗಿ, ಟರ್ಮಿನಲ್ ಮುಂದೆ ದೀರ್ಘಕಾಲ ನಿಲ್ಲುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಮತ್ತು ಅವರನ್ನು ಕರೆದುಕೊಂಡು ಹೋಗಲು ಬರುವ ವಾಹನಗಳಿಗೆ ಅನುಕೂಲವಾಗಲಿದೆ. ಈ ಬದಲಾವಣೆಗಳು ಡಿಸೆಂಬರ್ 8 ರಿಂದ ಜಾರಿಗೆ ಬರಲಿವೆ.

ರಾಜ್ಯ