ಭಯೋತ್ಪಾದಕ ಜಾಲ ಭೇದಿಸಿದ ದೆಹಲಿ ಪೊಲೀಸ್: ಮೂವರ ಬಂಧನ

ಭಯೋತ್ಪಾದಕ ಜಾಲ ಭೇದಿಸಿದ ದೆಹಲಿ ಪೊಲೀಸ್: ಮೂವರ ಬಂಧನ

ನವದೆಹಲಿ(ನ. 30): ಪಾಕಿಸ್ತಾನ ಬೆಂಬಲಿತ ಗ್ಯಾಂಗ್‌ಸ್ಟರ್‌ಗೆ ಲಿಂಕ್ ಹೊಂದಿರುವ ಪ್ರಮುಖ ಭಯೋತ್ಪಾದಕ ಮಾಡ್ಯೂಲ್ ಅನ್ನು ದೆಹಲಿ ಪೊಲೀಸ್ ವಿಶೇಷ ದಳ (Special Cell) ಭೇದಿಸಿದೆ. ಈ ಸಂಬಂಧ ಪಂಜಾಬ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ಗುಪ್ತಚರ ಸಂಸ್ಥೆ ನಿರ್ದೇಶನ:

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಪೊಲೀಸ್ ವಿಶೇಷ ದಳದ ಹೆಚ್ಚುವರಿ ಆಯುಕ್ತ (Additional CP) ಪ್ರಮೋದ್ ಕುಮಾರ್ ಕುಶ್ವಾಹ ಅವರು, ಪಾಕಿಸ್ತಾನಿ ಪ್ರಜೆ ಶಹಜಾದ್ ಭಟ್ಟಿ ಈ ಜಾಲವನ್ನು ಮುನ್ನಡೆಸುತ್ತಿದ್ದಾನೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ (Intelligence Agency) ಯ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಮಾಹಿತಿ ನೀಡಿದರು.

ಈ ಗುಂಪಿನಲ್ಲಿ ಬಂಧಿತರಾಗಿರುವ ಮೂವರು ಯುವಕರು ಇತ್ತೀಚೆಗೆ ನವೆಂಬರ್ 25 ರಂದು ಗುರುದಾಸ್‌ಪುರ ಸಿಟಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹ್ಯಾಂಡ್ ಗ್ರೆನೇಡ್ ಎಸೆದ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಯುವಕರನ್ನು ಬಳಸಿಕೊಂಡು ಕೃತ್ಯ?

ಶಹಜಾದ್ ಭಟ್ಟಿ ವಿದೇಶದಿಂದಲೇ ಈ ಗುಂಪಿಗೆ ನೇರವಾಗಿ ಮತ್ತು ತನ್ನ ಸಹವರ್ತಿಗಳ ಮೂಲಕ ನಿರ್ದೇಶನಗಳನ್ನು ನೀಡುತ್ತಿದ್ದನು. ಆತ ಯುವಕರನ್ನು ಬಳಸಿಕೊಂಡು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದನು ಎಂದು ಕುಶ್ವಾಹ ಅವರು ಹೇಳಿದರು. ಈ ಜಾಲದ ಕುರಿತು ಮತ್ತಷ್ಟು ತನಿಖೆ ಮುಂದುವರೆದಿದೆ.

ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ