ದುಬೈ ಏರ್‌ಶೋ 2025ರಲ್ಲಿ ಪ್ರದರ್ಶನ ಹಾರಾಟದ ವೇಳೆ ಭಾರತೀಯ ವಾಯುಪಡೆಯ ತೇಜಸ್ ಯುದ್ಧವಿಮಾನ ಪತನಗೊಂಡ ಪರಿಣಾಮ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಸಾವನ್ನಪ್ಪಿದ ಘಟನೆ ದೇಶವನ್ನೇ ಶೋಕದಲ್ಲಿ ಮುಳುಗಿಸಿದೆ.

ಸ್ವದೇಶಿ ಫೈಟರ್ ಜೆಟ್ ತೇಜಸ್ ಹಾರಾಟದ ವೇಳೆ ಅಚಾನಕ್ ನಿಯಂತ್ರಣ ಕಳೆದುಕೊಂಡು ಪತನಗೊಂಡು ಬೆಂಕಿಗಾಹುತಿಯಾಗಿದೆ.
ಎಚ್ಎಎಲ್ ಸಂತಾಪ
ತೇಜಸ್ ನಿರ್ಮಾಣ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಅಧಿಕೃತ ಹೇಳಿಕೆಯಲ್ಲಿ ಸಂತಾಪ ಸೂಚಿಸಿದೆ.
HAL ಹೇಳಿಕೆಯಲ್ಲಿ,“ದುಬೈ ಏರ್‌ಶೋದಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ತನ್ನ ಕರ್ತವ್ಯದಲ್ಲಿ ತೊಡಗಿದ್ದ ಧೈರ್ಯಶಾಲಿ IAF ಪೈಲಟ್ ಅಗಲಿಕೆಯಿಂದ ನಮಗೆ ಆಳವಾದ ದುಃಖವಾಗಿದೆ,” ಎಂದು ತಿಳಿಸಿದೆ.
ಘಟನೆಯ ನಂತರವೂ ಏರ್‌ಶೋ ಮುಂದುವರಿಕೆ
ವರದಿ ಪ್ರಕಾರ, ಅಪಘಾತದ ಸುಮಾರು 90 ನಿಮಿಷಗಳ ನಂತರವೇ ಏರ್‌ಶೋ ಹಾರಾಟ ಪ್ರದರ್ಶನಗಳು ಪುನರಾರಂಭಗೊಂಡವು. ‘ರಷ್ಯನ್ ನೈಟ್ಸ್’ ತಂಡ ಪ್ರದರ್ಶನ ಮುಂದುವರಿಸಿದರೆ, ಕೆಳಗೆ ತುರ್ತು ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ತೇಜಸ್ – ಭಾರತದ ಹೆಮ್ಮೆ
1984ರಲ್ಲಿ ಆರಂಭವಾದ ತೇಜಸ್ ಯೋಜನೆ, 2011ರಲ್ಲಿ ಅಧಿಕೃತ ಹಾರಾಟಕ್ಕೆ ಯೋಗ್ಯವೆಂದು ಘೋಷಿಸಲಾಯಿತು ಮತ್ತು 2016ರಲ್ಲಿ IAF ಸೇರ್ಪಡೆಯಾಯಿತು.ಪ್ರಸ್ತುತ IAFನ 45 ಮತ್ತು 18ನೇ ಸ್ಕ್ವಾಡ್ರನ್‌ಗಳು ತೇಜಸ್‌ನೊಂದಿಗೆ ಕಾರ್ಯನಿರ್ವಹಿಸುತ್ತಿವೆ.
2021ರಲ್ಲಿ ₹48,000 ಕೋಟಿ ಮೌಲ್ಯದ 83 ತೇಜಸ್ MK-1A ಖರೀದಿ ಒಪ್ಪಂದ ನಡೆದಿತ್ತು.2023ರಲ್ಲಿ ಇನ್ನೂ 97 ತೇಜಸ್ ವಿಮಾನಗಳ ಖರೀದಿಗೆ ಅನುಮೋದನೆ ದೊರಕಿತ್ತು.
ದುಬೈ ಏರ್‌ಶೋ 2025 – ವಿಶ್ವದ ದೊಡ್ಡ ಪ್ರದರ್ಶನ
ಈ ವರ್ಷ 150 ರಾಷ್ಟ್ರಗಳಿಂದ 1,500ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 1.48 ಲಕ್ಷ ಉದ್ಯಮ ವೃತ್ತಿಪರರು ಭಾಗವಹಿಸುತ್ತಿದ್ದು, ಏರ್‌ಶೋ ನವೆಂಬರ್ 17–21ರವರೆಗೆ ನಡೆದಿದೆ.

