ಜಗತ್ತಿನ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಾದ ಮಿಸ್ ಯೂನಿವರ್ಸ್ 2025 ಕಿರೀಟವನ್ನು ಮೆಕ್ಸಿಕೋದ ಫಾತಿಮಾ ಬೋಶ್ ಗೆದ್ದಿದ್ದಾರೆ. 25 ವರ್ಷದ ಫಾತಿಮಾ, ಈ ಬಾರಿ ಪೇಜಂಟ್‌ನಲ್ಲಿ ಅತ್ಯಂತ ಜನಪ್ರಿಯ ಸ್ಪರ್ಧಾರ್ಥಿಗಳಲ್ಲಿ ಒಬ್ಬರಾಗಿದ್ದರು.

ರನ್ನರ್-ಅಪ್‌ಗಳು
- 1ನೇ ರನ್ನರ್-ಅಪ್: ಥೈಲ್ಯಾಂಡ್‌ನ ಪ್ರವೀನರ್ ಸಿಂಗ್
- 2ನೇ ರನ್ನರ್-ಅಪ್: ವೆನೆಜುಯೆಲಾದ ಸ್ಟೆಫನಿ ಅಬಸಾಲಿ
ಭಾರತಕ್ಕೆ ನಿರಾಶೆ
ಭಾರತದ ಪ್ರತಿನಿಧಿ ಮಣಿಕಾ ವಿಶ್ವಕರ್ಮಾ ಈ ಬಾರಿ ಟಾಪ್ 12 ಪಟ್ಟಿಗೆ ಪ್ರವೇಶ ಪಡೆಯಲಿಲ್ಲ.
ಮಣಿಕಾ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಜನಿಸಿದ್ದು ಪ್ರಸ್ತುತ ದೆಹಲಿಯಲ್ಲಿ ವಾಸವಾಗಿದ್ದಾರೆ. ಆಗಸ್ಟ್ 18, 2025 ರಂದು ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2025 ಕಿರೀಟವನ್ನು ಮುಡಿಗೇರಿಸಕೊಂಡಿದ್ದರು.

