ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿರುವ ಬಹುಹತ್ಯೆ, ಅತ್ಯಾಚಾರ ಮತ್ತು ರಹಸ್ಯ ಸಮಾಧಿ ಆರೋಪಗಳ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಗುರುವಾರ ಜಿಲ್ಲೆಯ ಬೆಳ್ತಂಗಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸುಮಾರು 3,900 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದೆ.

ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) ಸೆಕ್ಷನ್ 215 ಅಡಿಯಲ್ಲಿ ಸಲ್ಲಿಸಲಾದ ಈ ಚಾರ್ಜ್‌ಶೀಟ್‌ನಲ್ಲಿ ಆರು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಪಟ್ಟಿಯಲ್ಲಿ –
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟನ್ನಾವರ, ಟಿ. ಜಯಂತ್,ವಿಟ್ಟಲ್ ಗೌಡ – ಮೊದಲು FIR ದಾಖಲಿಸಲು ಬೆಂಬಲಿಸಿದ್ದ ಹೋರಾಟಗಾರರು, ಹಾಗೂ ಸುಜಾತಾ ಭಟ್, ಮತ್ತೊಬ್ಬ ವ್ಯಕ್ತಿ (ವರದಿ ಪ್ರಕಾರ ದೂರುದಾರ ಚಿನ್ನಯ್ಯ)ಇವರನ್ನು ಸೇರಿಸಲಾಗಿದೆ.
ಎಸ್‌ಐಟಿ ತನಿಖೆಯ ಮಹತ್ಪೂರ್ಣ ಹಂತವಾದ ಈ ವರದಿ ಸಲ್ಲಿಕೆಯ ನಂತರ, ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

