ಬಿಹಾರ (ನ. 20): ನಿತೀಶ್ ಕುಮಾರ್ ಅವರು ಗುರುವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ಬಿಹಾರದ ಮುಖ್ಯಮಂತ್ರಿ ಆಗಿ ದಾಖಲೆಯ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.

ಹೊಸ ಸರ್ಕಾರದ ವಿಭಾಗೀಯ ಸಮತೋಲನದೊಂದಿಗೆ 26 ಮಂದಿ ಸಚಿವರು ಕೂಡ ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರಲ್ಲಿ ಬಿಜೆಪಿನಿಂದ 14, ಜೆಡಿಯು ಯಿಂದ 8,ಎಲ್ಜೇಪಿ (RV) ಯಿಂದ 2, ಹೆಚ್ಎಎಂ (HAM) ಯಿಂದ 1, ಆರ್ಎಲ್ಎಂ (RLM) ಯಿಂದ 1ಸಚಿವರನ್ನು ಒಳಗೊಂಡಿದೆ.
ಬಿಹಾರದ ಗವರ್ನರ್ ಅರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಹಾಗೂ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ನಿತೀಶ್ ಕುಮಾರ್ ಅವರ 10ನೇ ಪ್ರಮಾಣವಚನದೊಂದಿಗೆ ಬಿಹಾರದಲ್ಲಿ ಮತ್ತೊಮ್ಮೆ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ.

