ನವದೆಹಲಿ (ನ. 17): ದೆಹಲಿಯ ರೆಡ್ ಫೋರ್ಟ್ ಸಮೀಪ ಕಳೆದ ವಾರ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ದಳ (NIA) ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಸೀರ್ ಬಿಲಾಲ್ ವಾನಿ ಅವರನ್ನು ಬಂಧಿಸಿದೆ.

ಅನಂತನಾಗ ಜಿಲ್ಲೆಯ ಕಾಜಿಗುಂಡ್ ಮೂಲದ ವಾನಿ, ಆತ್ಮಹತ್ಯೆ ಬಾಂಬ್ ದಾಳಿ ನಡೆಸಿದ ಉಮರ್ ನಬಿ ಯ “ಸಕ್ರಿಯ ಸಹಚರ” ಎಂದು ಎನ್ಐಎ ತಿಳಿಸಿದೆ. ಸ್ಫೋಟಕ್ಕೂ ಮುನ್ನ ಡ್ರೋನ್ಗಳನ್ನು ಬದಲಾಯಿಸಿ ಉಗ್ರ ದಾಳಿಗೆ ತಾಂತ್ರಿಕ ಸಹಾಯ ನೀಡಿದ್ದ, ರಾಕೆಟ್ ತಯಾರಿಸಲು ಪ್ರಯತ್ನಿಸಿ ದ್ದನೆಂದು ತನಿಖಾ ದಳ ಹೇಳಿದೆ.
“ದಾನಿಷ್” ಎಂಬ ಅಲಿಯಾಸ್ ಹೆಸರಿನಿಂದಲೂ ಪರಿಚಿತರಾಗಿರುವ ವಾನಿಯನ್ನು, ವಿಶೇಷ ಎನ್ಐಎ ತಂಡ ಶ್ರೀನಗರದಲ್ಲೇ ಬಂಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

