ಕುಟುಂಬದಿಂದ ದೂರ, ರಾಜಕೀಯಕ್ಕೂ ವಿದಾಯ — ಲಾಲು ಪುತ್ರಿ ರೋಹಿಣಿ ಆಚಾರ್ಯ

ಕುಟುಂಬದಿಂದ ದೂರ, ರಾಜಕೀಯಕ್ಕೂ ವಿದಾಯ — ಲಾಲು ಪುತ್ರಿ ರೋಹಿಣಿ ಆಚಾರ್ಯ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (RJD) ಭಾರೀ ಸೋಲು ಕಂಡ ಒಂದು ದಿನದ ನಂತರ, ಪಕ್ಷಾಧ್ಯಕ್ಷ ಲಾಲು ಪ್ರಸಾದ್ ಅವರ ಮಗಳು ರೋಹಿಣಿ ಆಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಾಕಿದ ಪೋಸ್ಟ್ ಮೂಲಕ “ರಾಜಕೀಯ ತೊರೆಯುತ್ತಿದ್ದೇನೆ, ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ” ಎಂದು ಘೋಷಣೆ ಮಾಡಿದ್ದರಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ದೆಹಲಿ ಪ್ರಯಾಣಕ್ಕೆ ಮುನ್ನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣಾ ಸೋಲಿಗೆ ಸ್ಪಷ್ಟ ಕಾರಣವಾಗಿರುವವರೇ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನನಗೀಗ ಕುಟುಂಬವಿಲ್ಲ. ಏನನ್ನೂ ನನಗೆ ಕೇಳಬೇಡಿ. ಪ್ರಶ್ನೆಗಳು ಇದ್ದರೆ ತೇಜಸ್ವಿ ಯಾದವ್, ಸಂಜಯ್ ಯಾದವ್ ಮತ್ತು ರಮೀಸ್ ಅವರಿಗೆ ಕೇಳಿ. ಯಾರಾದರು ಜವಾಬ್ದಾರಿ ಹೊತ್ತುಕೊಳ್ಳಬೇಕು,” ಎಂದು ರೋಹಿಣಿ ತೀವ್ರವಾಗಿ ಪ್ರತಿಕ್ರಿಯಿಸಿದರು.

ಆಚಾರ್ಯ ಅವರು ತಮ್ಮ ಸಹೋದರ ಹಾಗೂ RJD ನಾಯಕ ತೇಜಸ್ವಿ ಯಾದವ್ ಅವರ ಇಬ್ಬರು ಹತ್ತಿರದ ಸಹಾಯಕರಾದ ಸಂಜಯ್ ಯಾದವ್ ಮತ್ತು ರಮೀಸ್‌ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿದ್ದು, ಪಕ್ಷದ ಆಂತರಿಕ ಕಲಹ ಮತ್ತಷ್ಟು ಗಂಭೀರವಾದಂತಾಗಿದೆ.

ಬಿಹಾರ ಚುನಾವಣಾ ಫಲಿತಾಂಶದಲ್ಲಿ NDA ಭಾರೀ ಗೆಲುವು ಸಾಧಿಸಿದ ಬಳಿಕ RJD ಒಳಗಿನ ಅಸಮಾಧಾನ ಹೊರಬಿದ್ದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ರಾಷ್ಟ್ರೀಯ