IPL 2026 Retention ಐಪಿಎಲ್ 2026: ಆರ್‌ಸಿಬಿ ಉಳಿಸಿಕೊಂಡ, ಕೈ ಬಿಟ್ಟ ಆಟಗಾರರ ಪಟ್ಟಿ ಇಲ್ಲಿದೆ

IPL 2026 Retention ಐಪಿಎಲ್ 2026: ಆರ್‌ಸಿಬಿ ಉಳಿಸಿಕೊಂಡ, ಕೈ ಬಿಟ್ಟ ಆಟಗಾರರ ಪಟ್ಟಿ ಇಲ್ಲಿದೆ

ಬೆಂಗಳೂರು: ಐಪಿಎಲ್ 2026 ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ವೇಳೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ನವೆಂಬರ್ 15ರ ಗಡುವಿನಂತೆ ಎಲ್ಲಾ 10 ಫ್ರಾಂಚೈಸಿಗಳೂ ತಮ್ಮ ಅಂತಿಮ ತಂಡಗಳ ವಿವರವನ್ನು ಬಿಸಿಸಿಐಗೆ ಸಲ್ಲಿಸಿವೆ.

ಆರ್‌ಸಿಬಿಯವರು ಮುಂದಿನ ಸೀಸನ್‌ಗೆ ಯಾವ ಆಟಗಾರರನ್ನು ಮುಂದುವರೆಸುತ್ತಿದ್ದಾರೆ ಮತ್ತು ಯಾರನ್ನು ತಂಡದಿಂದ ಬಿಡುಗಡೆ ಮಾಡಿದ್ದಾರೆ ಎಂಬ ವಿವರ ಇಲ್ಲಿದೆ:

ಬಿಡುಗಡೆ ಮಾಡಿದ ಆಟಗಾರರು (Released Players):

ಸ್ವಸ್ತಿಕ್ ಚಿಕಾರಾ, ಮಯಾಂಕ್ ಅಗರ್ವಾಲ್, ಲಿಯಂ ಲಿವಿಂಗ್‌ಸ್ಟೋನ್, ಟಿಮ್ ಸೀಫರ್ಟ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್ ಮುಜಾರಾಬಾನಿ, ಮೊಹಿತ್ ರಾಥಿ

ಉಳಿಸಿಕೊಂಡ ಆಟಗಾರರು (Retained Players):

ರಾಜತ್ ಪಾಟೀದಾರ್ (ಕ್ಯಾಪ್ಟನ್),ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕ್ರುನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಪರ್ಡ್, ಜೇಕಬ್ ಬೆತೆಲ್, ಜೋಷ್ ಹೇಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸೀಖ್ ಸಲಾಂ, ಅಭಿನಂದನ್ ಸಿಂಗ್ ಮತ್ತು ಸುಯಶ್ ಶರ್ಮಾ.

ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಪ್ರತಿಕ್ರಿಯಿಸಿ, ತಂಡದ ಕೋರ್ ಅನ್ನು ಉಳಿಸಿಕೊಳ್ಳಲಾಗಿದೆ ಎಂಬುದಕ್ಕೆ ಸಂತೋಷ ವ್ಯಕ್ತಪಡಿಸಿದರು.

“ಕಳೆದ ಸೀಸನ್‌ನಲ್ಲಿ ಅದ್ಭುತ ಕ್ರಿಕೆಟ್ ಆಡಿದ ಬಲವಾದ ತಂಡದ ಮೂಲವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಬಿಡುಗಡೆ ಮಾಡುತ್ತಿರುವ ಆಟಗಾರರ ಜೊತೆಗೆ ನನಗೆ ಹೃದಯದ ನೋವೂ ಇದೆ, ಅವರು ಕೂಡಾ ಕಳೆದ ವರ್ಷ ತಂಡದ ಪ್ರಯಾಣವನ್ನು ತುಂಬಾ ಆನಂದಿಸಿದ್ದರು ಎಂದು ನನಗೆ ಗೊತ್ತು. ಮುಂದಿನ ಹರಾಜಿನಲ್ಲಿ ನಮ್ಮ ತಂಡವನ್ನು ಇನ್ನಷ್ಟು ಬಲಪಡಿಸುತ್ತೇವೆ.” ಎಂದು ತಿಳಿಸಿದರು.

ಅವರು ಮುಂದುವರಿಸಿ,“ಹರಾಜು ನಡೆಯುವವರೆಗೂ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಈಗ ನಡೆಯುತ್ತಿರುವ ಸಯೀದ್ ಮುಶ್ತಾಕ್ ಅಲಿ ಟ್ರೋಫಿ ಹಾಗೂ ಮುಂದಿನ ತಿಂಗಳಲ್ಲಿ ನಡೆಯುವ ಪಂದ್ಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ,” ಎಂದರು.

ಕ್ರೀಡೆ ರಾಜ್ಯ ರಾಷ್ಟ್ರೀಯ