Pulwama house of Dr Umar Nabi demolished ದೆಹಲಿ ಸ್ಫೋಟ ಪ್ರಕರಣ: ಉಗ್ರ ಡಾ. ಉಮರ್ ನಬಿ ಮನೆ ನೆಲಸಮ

Pulwama house of Dr Umar Nabi demolished ದೆಹಲಿ ಸ್ಫೋಟ ಪ್ರಕರಣ: ಉಗ್ರ ಡಾ. ಉಮರ್ ನಬಿ ಮನೆ ನೆಲಸಮ

ಜಮ್ಮು-ಕಾಶ್ಮೀರ (ನ.14): ದೆಹಲಿ ಕೆಂಪುಕೋಟೆ ಬಳಿಯಲ್ಲಿ ಸಂಭವಿಸಿದ ಭೀಕರ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನಾಗಿರುವ ಡಾ. ಉಮರ್ ನಬಿ ಅವರ ಪುಲ್ವಾಮಾ ಜಿಲ್ಲೆಯ ಮನೆಯನ್ನು ಭದ್ರತಾ ಪಡೆಗಳು ಗುರುವಾರ ಮಧ್ಯರಾತ್ರಿ ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಮೂಲಗಳ ಪ್ರಕಾರ,ಸ್ಫೋಟಕಗಳನ್ನು ಹೊತ್ತ ಕಾರನ್ನು ಓಡಿಸಿದ್ದವರು ಡಾ. ಉಮರ್ ನಬಿ ಎಂಬುದು ತನಿಖೆಯಲ್ಲಿ ದೃಢಪಟ್ಟಿದ್ದು, ಅದರ ಮುಂದುವರಿದ ಕ್ರಮವಾಗಿ ಈ ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ.

ಕಳೆದ ಸೋಮವಾರ ರಾತ್ರಿ ಕೆಂಪುಕೋಟೆ ಸಮೀಪ ನಡೆದ ಕಾರ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು.ಈ ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಭದ್ರತಾ ಸಂಸ್ಥೆಗಳು ಜಮ್ಮು-ಕಾಶ್ಮೀರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ರಾಷ್ಟ್ರೀಯ