ಗದಗ ಜಿಲ್ಲೆಯ ಕಾಲುವೆ ಯೊಂದರಲ್ಲಿ ಕೈ-ಕಾಲು ಕಟ್ಟಿ ಹಾಕಿದ ಅನಾಮಧೇಯ ವ್ಯಕ್ತಿಯ ಶವ ಪತ್ತೆ

ಗದಗ ಜಿಲ್ಲೆಯ ಕಾಲುವೆ ಯೊಂದರಲ್ಲಿ ಕೈ-ಕಾಲು ಕಟ್ಟಿ ಹಾಕಿದ ಅನಾಮಧೇಯ ವ್ಯಕ್ತಿಯ ಶವ ಪತ್ತೆ

ಗದಗ: ಗದಗ ತಾಲ್ಲೂಕಿನ ಕಾನಗಿನಹಾಳ ಗ್ರಾಮದಲ್ಲಿ ಕೈ-ಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಒಬ್ಬ ಅನಾಮಧೇಯ ವ್ಯಕ್ತಿಯ ಶವ ಕಾಲುವೆಯಲ್ಲಿ ಪತ್ತೆಯಾದ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಪೊಲೀಸರ ಮಾಹಿತಿ ಪ್ರಕಾರ, ಸುಮಾರು 35 ರಿಂದ 40 ವರ್ಷದ ಪುರುಷನ ಶವ ಹಾರಳಾಪುರ ರಸ್ತೆಯ ಬಳಿಯ ಕಾಲುವೆಯಲ್ಲಿ ಕಂಡುಬಂದಿದೆ. ಮೃತನ ಕೈಗಳನ್ನು ಕಟ್ಟಿ, ಕಾಲುಗಳನ್ನು ಪ್ಯಾಂಟ್‌ನಿಂದ ಕಟ್ಟಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶವದ ತಲೆಯ ಹಾಗೂ ಎದೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಇದು ಹತ್ಯೆ ಪ್ರಕರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಶವವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಅಪರಾಧ ರಾಜ್ಯ