ವಾಷಿಂಗ್ಟನ್ ಸುಂದರ್ ಮಿಂಚು,ಅಕ್ಸರ್ ಪಟೇಲ್ ಮ್ಯಾನ್ ಆಫ್ ದಿ ಮ್ಯಾಚ್ – ಸರಣಿಯಲ್ಲಿ 2-1 ಮುನ್ನಡೆ ಪಡೆದ ಭಾರತ

ವಾಷಿಂಗ್ಟನ್ ಸುಂದರ್ ಮಿಂಚು,ಅಕ್ಸರ್ ಪಟೇಲ್ ಮ್ಯಾನ್ ಆಫ್ ದಿ ಮ್ಯಾಚ್ – ಸರಣಿಯಲ್ಲಿ 2-1 ಮುನ್ನಡೆ ಪಡೆದ ಭಾರತ

India vs Australia 4th T20 Match Highlights. ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 48 ರನ್ ಅಂತರದಿಂದ ಮಣಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಭಾರತ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 167/7 ರನ್‌ಗಳನ್ನು ಕಲೆಹಾಕಿತು. ಶುಭ್‌ಮನ್ ಗಿಲ್ 39 ಎಸೆತಗಳಲ್ಲಿ 46 ರನ್‌ಗಳೊಂದಿಗೆ ಅಗ್ರ ಸ್ಕೋರರ್ ಆಗಿದರು. ಅಕ್ಸರ್ ಪಟೇಲ್ 11 ಎಸೆತಗಳಲ್ಲಿ 21 ರನ್‌ಗಳ ಅಮೂಲ್ಯ ಇನಿಂಗ್ಸ್ ಆಡಿ, ಕೊನೆಯಲ್ಲಿ ತಂಡದ ಸ್ಕೋರ್ ಹೆಚ್ಚಿಸಿದರು.

ಆಸ್ಟ್ರೇಲಿಯಾದ ಪರ ನಾಥನ್ ಎಲಿಸ್ (3/21) ಮತ್ತು ಅಡಮ್ ಝಾಂಪಾ (3/45) ತಲಾ ಮೂರು ವಿಕೆಟ್ ಪಡೆದರು.

ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಬ್ಯಾಟಿಂಗ್ ಸಾಲು ಸಂಪೂರ್ಣ ಕುಸಿಯಿತು. ಅಕ್ಸರ್ ಪಟೇಲ್ (2/20) ಮತ್ತು ಶಿವಂ ದುಬೆ (2/20) ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ವಾಷಿಂಗ್ಟನ್ ಸುಂದರ್ ಕೇವಲ 3 ರನ್ ನೀಡಿ 3 ವಿಕೆಟ್‌ಗಳನ್ನು ಕಿತ್ತುಕೊಂಡು ಆಸ್ಟ್ರೇಲಿಯಾದ ಕೊನೆಯ ಬ್ಯಾಟ್ಸ್ಮನ್‌ರನ್ನು ಹತ್ತಿಕ್ಕಿದರು.

ಅಕ್ಸರ್ ಪಟೇಲ್ ತಮ್ಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಆಯ್ಕೆಯಾದರು.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ