ವಂದೇ ಮಾತರಂ 150ನೇ ವರ್ಷದ ಸಂಭ್ರಮ – ಭಾರತದ ರಾಷ್ಟ್ರಗೀತೆಯ ಐತಿಹಾಸಿಕ ಪಯಣ

ವಂದೇ ಮಾತರಂ 150ನೇ ವರ್ಷದ ಸಂಭ್ರಮ – ಭಾರತದ ರಾಷ್ಟ್ರಗೀತೆಯ ಐತಿಹಾಸಿಕ ಪಯಣ

ದೇಶಾದ್ಯಂತ “ವಂದೇ ಮಾತರಂ” ರಾಷ್ಟ್ರಗೀತೆಯ 150ನೇ ವರ್ಷದ ಸಂಭ್ರಮವನ್ನು ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಾಯ್ನಾಡಿನ ಭಕ್ತಿ, ತ್ಯಾಗ ಮತ್ತು ಏಕತೆಯ ಸಂಕೇತವಾಗಿ ಈ ಗೀತೆ ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತೀಯರ ಹೃದಯದಲ್ಲಿ ಸ್ಪಂದಿಸುತ್ತ ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ “ಮನ ಕಿ ಬಾತ್” ಕಾರ್ಯಕ್ರಮದಲ್ಲಿ “ರಾಷ್ಟ್ರಪ್ರೇಮ ಒಂದು ಭಾವನೆ ಆದರೆ ಅದಕ್ಕೆ ಧ್ವನಿಯಾದುದು ವಂದೇ ಮಾತರಂ” ಎಂದು ಹೇಳಿದ್ದರು. ಈ ಗೀತೆಯು ಶಬ್ದಕ್ಕಿಂತಲೂ ಭಾವನೆಯ ನಾದ ಎಂದು ಅವರು ಉಲ್ಲೇಖಿಸಿದ್ದಾರೆ.

ಇತಿಹಾಸದ ನೋಟ

“ವಂದೇ ಮಾತರಂ” ಎಂಬ ಈ ಗೀತೆಯನ್ನು ಪ್ರಸಿದ್ಧ ಬಂಗಾಳಿ ಕವಿ ಹಾಗೂ ಕಾದಂಬರಿಕಾರ ಬಂಕಿಂಚಂದ್ರ ಚಟ್ಟೋಪಾಧ್ಯಾಯ ಅವರು 1870ರ ದಶಕದಲ್ಲಿ ರಚಿಸಿದರು. 1882ರಲ್ಲಿ ಪ್ರಕಟವಾದ ಅವರ ಖ್ಯಾತ ಕಾದಂಬರಿ ಆನಂದಮಠನಲ್ಲಿ ಈ ಗೀತೆ ಸ್ಥಾನ ಪಡೆದಿತು. ಸಂಸ್ಕೃತ ಭಾಷೆಯಲ್ಲಿ ರಚಿತವಾದ ಈ ಗೀತೆ, 1896ರಲ್ಲಿ ಕೊಲ್ಕತ್ತಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಮೊಟ್ಟಮೊದಲು ಸಾರ್ವಜನಿಕವಾಗಿ ಈ ಗೀತೆಯನ್ನು ಹಾಡಿದರು. ನಂತರ, ಇದು ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಪರಿವರ್ತಿತವಾಯಿತು. ಸಭೆಗಳಲ್ಲಿ, ಮೆರವಣಿಗೆಗಳಲ್ಲಿ, ಪ್ರತಿಭಟನೆಗಳಲ್ಲಿ “ವಂದೇ ಮಾತರಂ” ಘೋಷಣೆ ದೇಶದಾದ್ಯಂತ ಗುಂಜಿಸಿತು.

ಸ್ವಾತಂತ್ರ್ಯ ಹೋರಾಟದ ಸಂಕೇತ

ಈ ಹಾಡು ಕೇವಲ ಸಂಗೀತದ ರೂಪದಲ್ಲಷ್ಟೇ ಅಲ್ಲದೆ, ಜನರಲ್ಲಿ ದೇಶಭಕ್ತಿಯ ಚೇತನೆಯನ್ನು ಉಂಟುಮಾಡಿದ ಘೋಷಣೆಯಾಗಿ ಪರಿಣಮಿಸಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು “ವಂದೇ ಮಾತರಂ” ಅನ್ನು ತಮ್ಮ ಜೀವದ ಘೋಷಣೆಯಾಗಿ ಮಾಡಿಕೊಂಡಿದ್ದರು. *ಆಧುನಿಕ ಭಾರತದ ಗೌರವ* 1950ರ ಜನವರಿ 24ರಂದು ಸಂವಿಧಾನ ಸಭೆಯು “ವಂದೇ ಮಾತರಂ” ಅನ್ನು ರಾಷ್ಟ್ರಗೀತೆಯಾಗಿ ಘೋಷಿಸಿತು. ಅಂದು ಸಭಾಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು ಇದಕ್ಕೆ ರಾಷ್ಟ್ರಗಾನ “ಜನ ಗಣ ಮನ”ದ ಸಮಾನ ಗೌರವ ನೀಡಬೇಕು ಎಂದು ಘೋಷಿಸಿದರು.

ಈ 150ನೇ ವರ್ಷದ ಸಂಭ್ರಮ ಪ್ರಯುಕ್ತ ನವೆಂಬರ್ 7ರಂದು (ನಾಳೆ) ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ನಡೆಯಲಿದೆ.

ರಾಷ್ಟ್ರೀಯ