100 Years of Indian Hockey:ಭಾರತೀಯ ಹಾಕಿಗೆ ಶತಮಾನೋತ್ಸವದ ಸಂಭ್ರಮ — ದೇಶಾದ್ಯಂತ 550 ಜಿಲ್ಲೆಗಳಲ್ಲಿ 1400 ಕ್ಕೂ ಹೆಚ್ಚು ಪಂದ್ಯಾವಳಿಗಳು

100 Years of Indian Hockey:
ಭಾರತೀಯ ಹಾಕಿಗೆ ಶತಮಾನೋತ್ಸವದ ಸಂಭ್ರಮ — ದೇಶಾದ್ಯಂತ 550 ಜಿಲ್ಲೆಗಳಲ್ಲಿ 1400 ಕ್ಕೂ ಹೆಚ್ಚು ಪಂದ್ಯಾವಳಿಗಳು

ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು, ಈ ತಿಂಗಳ 7ರಂದು ದೇಶದಾದ್ಯಂತ ಭಾರತೀಯ ಹಾಕಿಯ ಶತಮಾನೋತ್ಸವವನ್ನು ಆಚರಿಸಲು 550ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1,400 ಕ್ಕೂ ಅಧಿಕ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಅಭಿಯಾನವು ಹಾಕಿ ಕ್ರೀಡೆಯ ಕುರಿತು ವ್ಯಾಪಕ ಅರಿವು ಮೂಡಿಸಲು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ರಾಷ್ಟ್ರದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸಲು ಉದ್ದೇಶಿಸಲಾಗಿದೆ ಎಂದರು.

ಇನ್ನೂ “ಈ ಆಚರಣೆ ನಮ್ಮ ರಾಷ್ಟ್ರೀಯ ಹೆಮ್ಮೆ ಮತ್ತು ಶ್ರೇಷ್ಠತೆಯ ಪ್ರತೀಕವಾದ ಹಾಕಿಗೆ ಸಮರ್ಪಿತವಾದ ಶತಮಾನೋತ್ಸವ ಗೌರವವಾಗಿದೆ. ಯುವಕರು ಹಾಕಿಯ ಇತಿಹಾಸವನ್ನು ಅರಿತು, ಅದರ ಭವಿಷ್ಯ ನಿರ್ಮಾಣಕ್ಕೆ ಪ್ರೇರಿತರಾಗಬೇಕು” ಎಂದು ಹೇಳಿದರು.

ಅದಕ್ಕಾಗಿ ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಕೇಂದ್ರ ಮಂತ್ರಿಗಳ XI ಮತ್ತು ಹಾಕಿ ಇಂಡಿಯಾ ಮಿಕ್ಸ್‌ಡ್ XI ನಡುವೆ 30 ನಿಮಿಷದ ಪ್ರದರ್ಶನ ಪಂದ್ಯವೂ ನಡೆಯಲಿದೆ. ಈ ಪಂದ್ಯದಲ್ಲಿ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡದ ಉನ್ನತ ಮಟ್ಟದ ಆಟಗಾರರು ಪಾಲ್ಗೊಳ್ಳಲಿದ್ದಾರೆ.ಹಾಕಿಯ ವಿವಿಧ ಪೀಳಿಗೆಯ ದಿಗ್ಗಜರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು.

ಕ್ರೀಡೆ ರಾಷ್ಟ್ರೀಯ